Advertisement

ಕಟಪಾಡಿ: ಸಿಡಿಲಿನ ಆಘಾತಕ್ಕೆ ಯುವಕ ಸಾವು

01:41 AM May 18, 2020 | Sriram |

ಮಂಗಳೂರು/ಉಡುಪಿ: ಕರಾವಳಿಯ ಕೆಲವೆಡೆಗಳಲ್ಲಿ ರವಿವಾರ ರಾತ್ರಿಯೂ ಗುಡುಗು ಸಹಿತ ಮಳೆಯಾಗಿದೆ. ಇದೇ ವೇಳೆ ಸಿಡಿಲಿನ ಆಘಾತಕ್ಕೆ ಯುವಕನೊಬ್ಬ ಮೃತಪಟ್ಟಿದ್ದಾನೆ.

Advertisement

ಕಟಪಾಡಿ ಪಡುಏಣಗುಡ್ಡೆ ನಿವಾಸಿ ಸುರೇಶ್‌ ಕರ್ಕೇರ ಅವರ ಪುತ್ರ ಭರತ್‌ ಕುಮಾರ್‌ (21) ಮೃತ ಪಟ್ಟವರು. ಮಣಿಪಾಲದಲ್ಲಿ ಆಟೋಮೊಬೈಲ್‌ ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ಅವರು ಹೆತ್ತವರು ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಬೆಳ್ತಂಗಡಿ ತಾಲೂಕಿನ ದಿಡುಪೆ, ಮಲವಂತಿಗೆ ಪ್ರದೇಶದಲ್ಲಿ ಗಾಳಿ ಗುಡುಗು ಸಹಿತ ಉತ್ತಮ ಮಳೆ ಯಾಗಿದೆ. ಮಂಗಳೂರು ನಗರ, ಬಂಟ್ವಾಳ ತಾಲೂಕಿನ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ರವಿವಾರ ಸಂಜೆ ಸಾಧಾರಣ ಮಳೆ ಸುರಿದಿದೆ. ಕಾರ್ಕಳ, ಕುಂದಾಪುರ ತಾಲೂಕಿನ ಸಿದ್ದಾಪುರ, ಗೋಳಿಯಂಗಡಿ, ಬೆಳ್ವೆ ಮೊದಲಾದೆಡೆ ಗುಡುಗು ಸಹಿತ ಮಳೆಯಾಗಿದೆ.

ಉತ್ತಮ ಮಳೆ ಸಾಧ್ಯತೆ
ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡದ ಪರಿಣಾಮ ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ಕರಾವಳಿ ಭಾಗದಲ್ಲಿ ಮೇ 19ರ ಬೆಳಗ್ಗೆ 8 ಗಂಟೆಯವರೆಗೆ ಯಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

Advertisement

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ರವಿವಾರ ಪಣಂಬೂರಿನಲ್ಲಿ 35.2 ಡಿ.ಸೆ. ಗರಿಷ್ಠ ಮತ್ತು 27.1 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next