Advertisement

ಸಾವಿನ ಓಟ..: ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ 21 ಓಟಗಾರರು ಪ್ರತಿಕೂಲ ಹವಾಮಾನಕ್ಕೆ ಬಲಿ!

04:46 PM May 23, 2021 | Team Udayavani |

ಬೀಜಿಂಗ್: ಆಲಿಕಲ್ಲು ಸೇರಿದಂತೆ ಶೀತ ಮಳೆ, ಭಾರೀ ಗಾಳಿಗೆ ಸಿಲುಕಿ 21 ಮಂದಿ ಓಟಗಾರರು ಮೃತಪಟ್ಟ ಘಟನೆ ಚೀನಾದ ಗನ್ಸು ಪ್ರಾಂತ್ಯದಲ್ಲಿ ನಡೆದಿದೆ.

Advertisement

ವಾಯುವ್ಯ ಗನ್ಸು ಪ್ರಾಂತ್ಯದ ಬೈಯಿನ್ ನಗರದ ಸಮೀಪವಿರುವ ಯೆಲ್ಲೊ ರಿವರ್ ಸ್ಟೋನ್ ಅರಣ್ಯ ಪ್ರದೇಶದಲ್ಲಿ ಶನಿವಾರ 100 ಕಿ.ಮೀ ದೂರದ ಗುಡ್ಡಗಾಡು ಓಟ ಏರ್ಪಡಿಸಲಾಗಿತ್ತು. ಇದರಲ್ಲಿ ಭಾಗಿಯಾದ 21 ಮಂದಿ ಓಟಗಾರರು ಹವಾಮಾನದ ಆಕ್ರೋಶಕ್ಕೆ ತುತ್ತಾಗಿ ಬಲಿಯಾಗಿದ್ದಾರೆ.

ಕೆಲವೇ ಕ್ಷಣಗಳ ಅಂತರದಲ್ಲಿ ಹವಾಮಾನದಲ್ಲಿ ಭಾರೀ ಬದಲಾವಣೆ ಸಂಭವಿಸಿತು. ಆಲಿಕಲ್ಲು ಮಳೆಯಾಯಿತು, ನಂತರ ಹಿಮಪಾತ ಉಂಟಾಯಿತು. ಬಲವಾದ ಗಾಳಿ ಬೀಸಲಾರಂಭಿಸಿತು. ತಾಪಮಾನದಲ್ಲಿ ತೀವ್ರ ಕುಸಿತ ಉಂಟಾಯಿತು ಎಂದು ಸ್ಥಳೀಯ ಮೇಯರ್ ತಿಳಿಸಿದ್ದಾರೆ.

ಕೆಲವು ಓಟಗಾರರಿಂದ ಸಹಾಯದ ಸಂದೇಶಗಳನ್ನು ಸ್ವೀಕರಿಸಿದ ಸ್ವಲ್ಪ ಸಮಯದ ನಂತರ, ಮ್ಯಾರಥಾನ್ ಸಂಘಟಕರು ತಮ್ಮ ತಂಡವನ್ನು ರವಾನಿಸಿದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಹವಾಮಾನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಸ್ಥಳೀಯ ಅಧಿಕಾರಿಗಳು ಹೆಚ್ಚಿನ ರಕ್ಷಣಾ ಸಿಬ್ಬಂದಿಯನ್ನು ಸಹಾಯಕ್ಕಾಗಿ ಕಳುಹಿಸಿದರು. ಓಟವನ್ನು ತಕ್ಷಣವೇ ರದ್ದು ಮಾಡಲಾಯಿತು. ಪ್ರಾಂತೀಯ ಅಧಿಕಾರಿಗಳು ಇದರ ಬಗ್ಗೆ ಇನ್ನಷ್ಟು ತನಿಖೆ ಮಾಡುತ್ತಾರೆ ಎಂದು ಮೇಯರ್ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next