ಬೆಂಗಳೂರು: ಗುರುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಹಾಗೂ ಉತ್ತರ ಒಳನಾಡಿನ ಹಲವೆಡೆ ಉತ್ತಮ ಮಳೆಯಾಯಿತು. ಆಗುಂಬೆಯಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 21
ಸೆಂ. ಮೀ. ಮಳೆ ಸುರಿಯಿತು.
ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು(ಸೆಂ.ಮೀ.ಗಳಲ್ಲಿ): ಕಾರವಾರ 17, ಅಂಕೋಲಾ 14, ಶಿರಾಲಿ, ಕಮ್ಮರಡಿ ತಲಾ 13, ಸುಬ್ರಹ್ಮಣ್ಯ 12, ಕುಂದಾಪುರ, ಕದ್ರಾ, ಸಿದ್ದಾಪುರ ತಲಾ 11, ಕೊಲ್ಲೂರು 10, ಮೂಡುಬಿದಿರೆ, ಬೆಳ್ತಂಗಡಿ, ಕೋಟ, ಗೇರುಸೊಪ್ಪಾ, ಮಾಣಿ ತಲಾ 9, ಹೊನ್ನಾವರ, ಪುತ್ತೂರು, ಮಂಕಿ ತಲಾ 8, ಶೃಂಗೇರಿ, ಜಯಪುರ, ಕೊಪ್ಪ ತಲಾ 7,
ಮಂಗಳೂರು, ಕುಮಟಾ, ಮಂಗಳೂರು ವಿಮಾನ ನಿಲ್ದಾಣ ತಲಾ 6, ಲೋಂಡಾ, ಸೊರಬ ತಲಾ 5, ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣ, ಬೆಂಗಳೂರು ನಗರ, ಗೌರಿಬಿದನೂರು, ಮಾಗಡಿ, ದಾವಣಗೆರೆ, ಯಲಹಂಕ ಐಎಎಫ್ ವಿಮಾನ ನಿಲ್ದಾಣ, ಸರಗೂರು ತಲಾ 1. ಶನಿವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.