Advertisement
ಎಲ್ಲೆಲ್ಲಿ ಚುನಾವಣೆ?ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ಬಾಂಗ್ಲಾ ದೇಶ, ಇಂಡೋನೇಷ್ಯಾ, ಉಕ್ರೇನ್, ತೈವಾನ್, ಮೆಕ್ಸಿಕೋ, ವೆನೆಜುವೆಲಾ, ಇರಾನ್, ಸುಡಾನ್ ಮತ್ತು ಯುರೋಪ್‌ನ 9 ರಾಷ್ಟ್ರಗಳ ಜನರು ಈ ವರ್ಷ ತಮ್ಮ ಮತಾಧಿಕಾರವನ್ನು ಚಲಾಯಿಸಿ, ದೇಶದ ನೂತನ ಆಡಳಿತಗಾರರನ್ನು ಆಯ್ಕೆ ಮಾಡಲಿದ್ದಾರೆ. ರಷ್ಯಾ, ಅಮೆರಿಕ, ಬ್ರಿಟನ್ ನಲ್ಲಿ ನಡೆಯಲಿರುವ ಚುನಾವಣೆ ಗಳು ಇಡೀ ವಿಶ್ವದ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.
ಭಾರತದಲ್ಲಿ ಎಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅಲ್ಲದೆ ಈ ವರ್ಷ ದೇಶದ ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಈ ವರ್ಷ ಚುನಾವಣೆ ನಡೆಯಲಿದೆ. ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ, ಸಿಕ್ಕಿಂ, ಜಾರ್ಖಂಡ್, ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಸದ್ಯ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರ ವಿಧಾನಸಭೆಗೆ ಕೂಡ ಈ ವರ್ಷವೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ವಿದೇಶಗಳಲ್ಲಿ ಚುನಾವಣೆ ಭರಾಟೆ
Related Articles
Advertisement
ತೈವಾನ್‌ನಲ್ಲಿ ಜನವರಿ 13ರಂದು ನಡೆಯಲಿರುವ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು ತೈವಾನ್‌ನಲ್ಲಿ ಚೀನದ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಮೆರಿಕ ಸಹಿತ ಚೀನ ವಿರೋಧಿ ರಾಷ್ಟ್ರಗಳು ಶತಾಯಗತಾಯ ಪ್ರಯತ್ನಗಳನ್ನು ಮುಂದುವರಿಸಿವೆ. ಇದರ ಹೊರ ತಾಗಿಯೂ ಚೀನ ತನ್ನ ಪರವಾಗಿ ರುವ ನಾಯಕನ ಹಿಡಿತಕ್ಕೆ ತೈವಾನ್‌ನ ಆಡಳಿತ ಸೂತ್ರ ವನ್ನು ಒಪ್ಪಿಸುವ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ಹೆಣೆಯುತ್ತಿದೆ. ಈ ಬೆಳವಣಿಗೆಗಳು ಸಹಜವಾಗಿ ಜಾಗತಿಕ ವಾಗಿ ಕುತೂಹಲಕ್ಕೆ ಕಾರಣವಾಗಿದ್ದು ಚೀನದ ಕುತಂತ್ರ ವನ್ನು ವಿಫಲಗೊಳಿ ಸುವ ನಿಟ್ಟಿನಲ್ಲಿ ವಿಶ್ವ ರಾಷ್ಟ್ರಗಳ ಪ್ರಯತ್ನ ಗಳು ಸಫಲವಾದೀತೇ ಎಂಬುದೇ ಸದ್ಯದ ಪ್ರಶ್ನೆ
ಇಂಡೋನೇಷ್ಯಾ ದಲ್ಲಿ ಫೆ. 14ರಂದು ಚುನಾವಣೆ ನಡೆಯಲಿದ್ದರೆ, ಮೆಕ್ಸಿಕೋದಲ್ಲಿ ಜೂನ್ 2ರಂದು ಅಧ್ಯಕ್ಷೀಯ ನಡೆಯಲಿದೆ.
ಯುರೋಪಿಯನ್ ಪಾರ್ಲಿಮೆಂಟ್‌ಗೆ ಜೂ. 6-9ರಂದು ಚುನಾವಣೆ ನಡೆಯಲಿದೆ. ಬೆಲ್ಜಿಯಂನಲ್ಲಿ ಜೂ. 9ರಂದು ಚುನಾವಣೆ ನಡೆಯಲಿದೆ. ಅಷ್ಟು ಮಾತ್ರವಲ್ಲದೆ ಆಸ್ಟ್ರಿಯಾ, ಕ್ರೊವೇಶಿಯಾ ಮತ್ತು ಫಿನ್ಲಂಡ್‌ನಲ್ಲೂ ಈ ವರ್ಷವೇ ಚುನಾವಣೆ ನಡೆಯಲಿದೆ.
ಯುದ್ಧಪೀಡಿತ ಉಕ್ರೇನ್‌ನಲ್ಲೂ ಈ ವರ್ಷ ಚುನಾವಣೆ ನಡೆಯಬೇಕಿದೆ ಯಾದರೂ ಈ ಬಗ್ಗೆ ಅನಿಶ್ಚತತೆಗಳು ಮುಂದುವರಿದಿವೆ.
ಆಫ್ರಿಕಾದ ದೇಶಗಳಾದ ಅಲ್ಜೀರಿಯಾ, ಟ್ಯುನೀಶಿಯಾ, ಘಾನಾ, ರವಾಂಡ, ನಮೀಬಿಯಾ, ಮೊಜಾಂಬಿಕ್, ಸೆನೆಗಲ್, ಟೋಗೊ ಮತ್ತು ದಕ್ಷಿಣ ಸುಡಾನ್ ನಲ್ಲಿ 2024ರಲ್ಲಿ ಚುನಾವಣೆ ನಡೆಯಲಿದೆ.
ಪಾಕಿಸ್ಥಾನದಲ್ಲಿ ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಸದ್ಯ ಹಂಗಾಮಿ ಪ್ರಧಾನಿ ಅಲ್ಲಿನ ಆಡಳಿತವನ್ನು ನಿರ್ವಹಿಸುತ್ತಿದ್ದು, ದೇಶದಲ್ಲಿನ ರಾಜಕೀಯ ಅಸ್ಥಿರತೆಗೆ ಈ ಚುನಾವಣೆ ಅಂತ್ಯ ಹಾಡೀತೇ ಎಂಬ ಕುತೂಹಲ ಮೂಡಿದೆ. ಸದ್ಯ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಜೈಲು ಸೇರಿರುವುದರಿಂದ ಅವರ ಪಕ್ಷವಾದ ಪಿಟಿಐ, ಗೊಹರ್ ಆಲಿ ಖಾನ್ ನೇತೃತ್ವದಲ್ಲಿ ಈ ಚುನಾವಣೆ ಎದುರಿಸಲಿದ್ದರೆ, ಈಗ ದೇಶಕ್ಕೆ ವಾಪಸಾಗಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ನೇತೃತ್ವದ ಪಿಎಂಎಲ್(ಎನ್) ಮತ್ತು ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಿಪಿಪಿ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಅಮೆರಿಕದಲ್ಲಿ ಈ ವರ್ಷದ ನವೆಂಬರ್ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಎಂದಿನಂತೆ ರಿಪಬ್ಲಿಕನ್ಸ್ ಮತ್ತು ಡೆಮಾಕ್ರಾಟ್ಸ್ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಂಭವವಿದೆ. ಹಾಲಿ ಅಧ್ಯಕ್ಷ ಜೋ ಬೈಡೆನ್ ಈಗಾಗಲೇ ಮತ್ತೆ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇನ್ನು ಚುನಾವಣ ಸ್ಪರ್ಧೆ ಯಿಂದ ಅನರ್ಹಗೊಂಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣ ಅಖಾಡಕ್ಕೆ ಧುಮುಕುವ ಸಲುವಾಗಿ ನ್ಯಾಯಾಲಯ ದಲ್ಲಿ ತಮ್ಮ ಕಾನೂನು ಹೋರಾಟವನ್ನು ತೀವ್ರ ಗೊಳಿಸಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದಲ್ಲೂ ಈ ವರ್ಷವೇ ಚುನಾವಣೆ ನಡೆಯಲಿದ್ದು ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಎಲ್ಲ ಅಡೆತಡೆಗಳ ಹೊರ ತಾಗಿಯೂ ತಮ್ಮ ಜನ ಪ್ರಿಯತೆಯ ಬಲದಿಂದ ಮತ್ತೆ ದೇಶದ ಅಧ್ಯಕ್ಷ ಗಾದಿಗೇರುವ ಮೂಲಕ ದಾಖಲೆ ಸ್ಥಾಪಿಸಲು ಸಜ್ಜಾಗಿದ್ದಾರೆ. ಈ ಚುನಾ ವಣೆಯು ಮಾರ್ಚ್ 17ಕ್ಕೆ ನಿಗದಿಯಾಗಿದೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಈಗಾಗಲೇ ಈ ವರ್ಷ ಚುನಾವಣೆ ನಡೆಸುವ ಇಂಗಿತ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ನವೆಂಬರ್ ಅಂತ್ಯದಲ್ಲಿ ಬ್ರಿಟನ್ ಮತ್ತೂಮ್ಮೆ ಹಾಲಿ ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿ ಮತ್ತು ವಿಪಕ್ಷ ಲೇಬರ್ ಪಾರ್ಟಿಯ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆ ಯಾಗಲಿದೆ.
ಯುದ್ಧ , ಆರ್ಥಿಕ ಬಿಕ್ಕಟ್ಟಿನ ಮಧ್ಯ ಚುನಾವಣೆಗಳ ಮಹಾಪೂರಸದ್ಯ ವಿಶ್ವದಲ್ಲಿ ಎರಡು ಯುದ್ಧಗಳು ನಡೆಯುತ್ತಿವೆ. ಒಂದೆಡೆಯಿಂದ ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭಗೊಂಡು ಎರಡು ವರ್ಷ ಸಮೀಪಿಸುತ್ತಿದ್ದರೂ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಳೆದೊಂದು ವಾರದಿಂದೀಚೆಗೆ ಇತ್ತಂಡಗಳ ನಡುವೆ ಕ್ಷಿಪಣಿ, ಡ್ರೋನ್‌ಗಳ ದಾಳಿ-ಪ್ರತಿದಾಳಿಗಳು ತೀವ್ರಗೊಂಡಿವೆ. ಈ ಯುದ್ಧದ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ವಿಶ್ವದೆಲ್ಲೆಡೆಯ ರಾಷ್ಟ್ರಗಳ ಮೇಲೂ ಬಿದ್ದಿದೆ. ಈ ಬೆಳವಣಿಗೆಯ ನಡುವೆಯೂ ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್ ಈ ಎರಡೂ ರಾಷ್ಟ್ರಗಳಲ್ಲೂ ಈ ವರ್ಷ ಚುನಾವಣೆ ನಡೆಯಲಿದೆ. ಈ ಯುದ್ಧದಲ್ಲಿ ಪಾಶ್ಚಾತ್ಯ ರಾಷ್ಟ್ರಗಳು ಉಕ್ರೇನ್‌ನ ಬೆಂಬಲಕ್ಕೆ ನಿಂತಿದ್ದು ಈ ಪೈಕಿ ಅಮೆರಿಕ ಸಹಿತ ಕೆಲವು ರಾಷ್ಟ್ರಗಳಲ್ಲಿ ಚುನಾವಣೆ ನಡೆಯಲಿದೆ. ಇನ್ನು ಇಸ್ರೇಲ್ ಮತ್ತು ಹಮಾಸ್ ಬಂಡಕೋರರ ನಡುವಣ ಯುದ್ಧ ಆರಂಭಗೊಂಡು ನಾಲ್ಕು ತಿಂಗಳು ಸಮೀಪಿಸಿದ್ದು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಯುದ್ಧದ ಪಶ್ಚಾತ್ ಪರಿಣಾಮಗಳು ಈಗ ಜಾಗತಿಕ ಸಮುದಾಯವನ್ನು ಕಾಡತೊಡಗಿವೆ. ಇದರ ನಡುವೆಯೇ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ನಿರಂತರವಾಗಿ ದಾಳಿ ನಡೆುತ್ತಿರುವುದರಿಂದಾಗಿ ಆಹಾರ ಉತ್ಪನ್ನಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳ ಸಹಿತ ವಿವಿಧ ಸರಕುಗಳ ಸಾಗಣೆಗೆ ಭಾರೀ ಅಡಚಣೆ ಉಂಟಾಗಿದೆ. ಹೌತಿ ಬಂಡುಕೋರರ ಈ ದಾಳಿಗಳ ಪರಿಣಾಮ ಜಾಗತಿಕ ಪೂರೈಕೆ ಸರಪಳಿ ಜಾಲದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಜಾಗತಿಕ ಬಲಾಡ್ಯ ರಾಷ್ಟ್ರಗಳು ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿವೆ. ಈ ವರ್ಷ ಚುನಾವಣೆ ನಡೆಯಲಿರುವ ಬಹುತೇಕ ದೇಶಗಳಲ್ಲಿ ಹಣದುಬ್ಬರ ಮೇರೆ ಮೀರಿದೆ. ಸಹಜವಾಗಿಯೇ ಈ ಬೆಳವಣಿಗೆಗಳು ಹಾಲಿ ಆಡಳಿತಾರೂಢ ನಾಯಕರು ಮತ್ತು ಪಕ್ಷಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇನ್ನು ವಿಶ್ವದಲ್ಲಿ ಎರಡು ಯುದ್ಧಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಯುದ್ಧದ ಕುರಿತಂತೆ ಆಯಾಯ ರಾಷ್ಟ್ರಗಳು ಇಟ್ಟ ಹೆಜ್ಜೆ, ನಾಯಕರ ತೀರ್ಮಾನಗಳು ಕೂಡ ಒಂದಿಷ್ಟು ಚರ್ಚೆಗೆ ಗ್ರಾಸವಾಗಿರುವುದರಿಂದ ಇದು ಕೂಡ ಚುನಾವಣ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಂಭವವಿದೆ.