Advertisement
ಹೊಂಬಾಳೆ ಫಿಲಂಸ್ ನಿರ್ಮಿಸಿದ, ರಿಷಭ್ ಶೆಟ್ಟಿ ನಿರ್ದೇಶಿಸಿ, ನಾಯಕ ನಟನಾಗಿ ಅಭಿನಯಿಸಿದ ಕಾಂತಾರ ಸಿನೆಮಾ ನಾಡಿನೆಲ್ಲೆಡೆ ಸೆ. 30ರಂದು ತೆರೆ ಕಂಡಿತು. ಮೊದಲ ದಿನದಿಂದಲೇ ಸಿನಿಪ್ರೇಮಿಗಳ ಮನಗೆದ್ದಿದ್ದ ಕಾಂತಾರ ಸಿನೆಮಾವು ವೀಕ್ಷಣೆ, ಗಳಿಕೆಯಲ್ಲೂ ದಾಖಲೆ ಸೃಷ್ಟಿಸಿದೆ. 25 ದಿನ ಗ ಳಲ್ಲಿ ರಾಜ್ಯದ 77 ಲಕ್ಷ ಮಂದಿ ಈ ಸಿನೆಮಾವನ್ನು ವೀಕ್ಷಿ ಸುವ ಮೂಲಕ ಹೊಸ ಹೆಗ್ಗಳಿಕೆಗೆ ಪಾತ್ರವಾಯಿತು. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳ, ತುಳು ಭಾಷೆಗಳಲ್ಲಿ ಪರದೆಯ ಮೇಲೆ ವಿಜೃಂಭಿಸುತ್ತಿರುವ ಕಾಂತಾರದ ಇಂಗ್ಲಿಷ್ ಅವತರಣಿಕೆ ಮುಂದಿನ ಜನವರಿಯಲ್ಲಿ ಬಿಡುಗಡೆಯಾಗಲಿದೆ. ನ.24ರಂದು ಒಟಿಟಿಯಲ್ಲಿ ಈ ಸಿನೆಮಾ ಬಿಡುಗಡೆಯಾಗಿದೆ. 16ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂತಾರ ಸಿನೆಮಾ ಈಗಾಗಲೇ 400 ಕೋ.ರೂ. ಗಳಿಗೂ ಅಧಿಕ ಆದಾಯವನ್ನು ಕಲೆಹಾಕಿದೆ. ಪ್ರಸಕ್ತ ವರ್ಷ ಕನ್ನಡದ ಜೇಮ್ಸ್,.ಕೆಜಿಎಫ್-2, ಚಾರ್ಲಿ, ವಿಕ್ರಾಂತ್ ರೋಣ, ಕಾಂತಾರ ಸಿನೆಮಾಗಳು ನೂರು ಕೋಟಿ ಕ್ಲಬ್‌ಗ ಸೇರ್ಪಡೆಯಾಗಿರುವುದು ವಿಶೇಷ.**
ಅಮೆರಿಕ ಸಂಸತ್ ಚುನಾವಣೆ: ಬೆಳಗಾವಿಯ ಶ್ರೀ ಸಹಿತ ನಾಲ್ವರು ಎನ್ನಾರೈಗಳ ಆಯ್ಕೆ
ಅಮೆರಿಕದ ಸಂಸತ್ ಆಗಿರುವ ಕಾಂಗ್ರೆಸ್‌ಗೆ ನಡೆದ ಮಧ್ಯಾಂತರ ಚುನಾವಣೆ ಯಲ್ಲಿ ಭಾರತೀಯ ಮೂಲದ ನಾಲ್ವರು ಜಯಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಆಡಳಿತ ಪಕ್ಷವಾದ ಡೆಮಾಕ್ರಾಟ್‌ನ ಅಭ್ಯರ್ಥಿಗಳಾಗಿರುವ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯ ಪಾಲ್ ಹೌಸ್ ಆಫ್ ರೆಪ್ರ ಸೆಂಟೇಟಿವ್ಸ್‌ಗೆ ಆಯ್ಕೆ ಯಾಗಿದ್ದರು.
ಗಮನ ಸೆಳೆಯುವ ಸಾಧನೆ ಎಂದರೆ ಕರ್ನಾಟಕದ ಬೆಳಗಾವಿ ಮೂಲದ ಉದ್ಯಮಿ ಶ್ರೀ ಥಾಣೆದಾರ್ ಅವರು ಮಿಚಿಗನ್ ಕ್ಷೇತ್ರದಿಂದ ಆಯ್ಕೆ ಯಾಗಿ ದ್ದರು. ಅವರು ರಿಪಬ್ಲಿಕನ್ ಪಕ್ಷದ ಮಾರ್ಟೆಲ್ ಬಿವಿಂಗ್ಸ್ ಅವರನ್ನು ಸೋಲಿಸಿದ್ದರು.
**
ಖರ್ಗೆಗೆ ಎಐಸಿಸಿ ಪಟ್ಟ; ಕಾಂಗ್ರೆಸ್‌ನ ಮೇರು ಹುದ್ದೆಗೇರಿದ ಕನ್ನಡಿಗ
ಕರ್ನಾಟಕ ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅ. 26ರಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 24ವರ್ಷಗಳ ಬಳಿಕ ಗಾಂಧಿ ಕುಟುಂಬೇತರ ನಾಯಕರೋರ್ವರು ಎಐಸಿಸಿ ಅಧ್ಯಕ್ಷರಾಗಿರುವುದು ವಿಶೇಷ. ಅಷ್ಟು ಮಾತ್ರವಲ್ಲದೆ ಜಗಜೀವನ್‌ರಾಮ್ ಅವರ ಬಳಿಕ ಕಾಂಗ್ರೆಸ್ ಅಧ್ಯಕ್ಷ ಗಾದಿಗೇರಿದ ಮೊದಲ ದಲಿತ ನಾಯಕರಾಗಿದ್ದಾರೆ.
Related Articles
Advertisement
ನಗರ ಪ್ರದೇಶಗಳಲ್ಲಿ “ನಮ್ಮ ಕ್ಲಿನಿಕ್” ಆರಂಭರಾಜ್ಯದ ನಗರ ಪ್ರದೇಶಗಳಲ್ಲಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ದಿಲ್ಲಿ ಮಾದರಿ ಯಲ್ಲಿ ಮುಂದಿನ ವರ್ಷದ ಜನವರಿ ಅಂತ್ಯದೊಳಗೆ 438 “ನಮ್ಮ ಕ್ಲಿನಿಕ್’ಗಳನ್ನು ತೆರೆಯಲು ಸಚಿವ ಸಂಪುಟ ತನ್ನ ಒಪ್ಪಿಗೆ ಸೂಚಿಸಿತ್ತು. ನಗರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ “ನಮ್ಮ ಕ್ಲಿನಿಕ್’ ಆರಂಭಿಸಲು ತೀರ್ಮಾನಿಸಿತ್ತು. ಆರಂಭದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರು, ನರ್ಸ್‌ಗಳು, ಕಚೇರಿ ಸಿಬಂದಿಯನ್ನು ಈ ಕ್ಲಿನಿಕ್‌ಗಳಿಗೆ ನೇಮಕ ಮಾಡಿ ಕೊಳ್ಳಲಾಗುತ್ತದೆ. ಅದರಂತೆ ಡಿ. 14ರಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ವರ್ಚುವಲ್ ಆಗಿ ರಾಜ್ಯವ್ಯಾಪಿ 114 “ನಮ್ಮ ಕ್ಲಿನಿಕ್’ ಕೇಂದ್ರಗಳಿಗೆ ಅಧಿಕೃತ ವಾಗಿ ಚಾಲನೆ ನೀಡಿದರು. ಜನರಲ್ಲಿ ಹಠಾತ್ತಾಗಿ ಕಾಣಿಸಿಕೊಳ್ಳುವ ಸಾಮಾನ್ಯ ರೋಗಗಳನ್ನು ತಡೆಗಟ್ಟಲು ನಮ್ಮ ಕ್ಲಿನಿಕ್‌ಗಳ ಮೂಲಕ ಪ್ರಯತ್ನಿಸುವುದು ಇದರ ಧ್ಯೇಯೋದ್ದೇಶವಾಗಿದೆ. ನಮ್ಮ ಕ್ಲಿನಿಕ್ ಕೇಂದ್ರಗಳಲ್ಲಿ ವೈದ್ಯರು, ತಂತ್ರಜ್ಞರು, ನರ್ಸಿಂಗ್ ಸಿಬಂದಿ ಇದ್ದು 12 ಪರೀಕ್ಷಾ ಸೇವೆಗಳು ಉಚಿತವಾಗಿ ಲಭಿಸಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಧುನಿಕ ಪರೀಕ್ಷಾ ಮತ್ತು ಚಿಕಿತ್ಸಾ ಉಪಕರಣಗಳನ್ನು ಒದಗಿಸುವ ಜತೆ ಯಲ್ಲಿ ಮತ್ತಷ್ಟು ಸೇವೆ ಗಳನ್ನು ಈ ಕ್ಲಿನಿಕ್‌ಗಳಿಗೆ ಸೇರ್ಪಡೆ ಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.