Advertisement
ಭಾರತ ಮೆಗಾ ವಿಶ್ವ ಬಾಕ್ಸಿಂಗ್ ಕೂಟವೊಂದರ ಭಾರತ ಆತಿಥ್ಯ ವಹಿ ಸುತ್ತಿರುವುದು ಇದೇ ಮೊದಲು ಎಂಬುದು ವಿಶೇಷ. ಈ ವಿಷಯವನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಮಂಗಳವಾರ ಮಾಸ್ಕೋದಲ್ಲಿ ನಡೆದ 2 ದಿನಗಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಕಟಿಸಿದೆ.
2006ರಲ್ಲಿ ಮಹಿಳಾ ಬಾಕ್ಸಿಂಗ್ ಕೂಟವನ್ನು ಭಾರತ ಯಶಸ್ವಿಯಾಗಿ ಆಯೋಜಿಸಿತ್ತು. ಆದರೆ ಪುರುಷರ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತ ಇದುವರೆಗೆ ಆತಿಥ್ಯ ವಹಿಸಿರಲಿಲ್ಲ. 1990ರಲ್ಲಿ ಭಾರತ ಮುಂಬಯಿಯಲ್ಲಿ ವಿಶ್ವ ಕಪ್ ಕೂಟವನ್ನು ಆಯೋ ಜಿಸಿತ್ತು. ಅನಂತರ ಭಾರತದ ಆತಿಥ್ಯದಲ್ಲಿ ನಡೆದ ದೊಡ್ಡ ಕೂಟವೆಂದರೆ 2010ರಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್. ಇದು ಹೊಸದಿಲ್ಲಿಯಲ್ಲಿ ನಡೆದಿತ್ತು. ಭಾರತ ಅತ್ಯಂತ ಯಶಸ್ವಿಯಾಗಿ ಈ ಕೂಟವನ್ನು ಆಯೋಜಿಸಿತ್ತು ಎನ್ನುವುದು ಗಮನಾರ್ಹ ಸಂಗತಿ. 2019ರಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್ ಕೂಟಕ್ಕೆ ಸೋಚಿ ಆತಿಥ್ಯ ವಹಿಸುತ್ತಿದೆ. ಇದಾದ ಬಳಿಕ ನಡೆಯ ಲಿರುವ ಕೂಟಕ್ಕೆ ಭಾರತ ಆತಿಥ್ಯ ವಹಿ ಸಲಿದೆ ಎನ್ನುವುದನ್ನು ಪ್ರಕಟಿಸುವುದಕ್ಕೆ ಸಂತಸವಾಗುತ್ತಿದೆ. ಭಾರತದಲ್ಲಿ ಈ ಕೂಟ ನಡೆಸುವುದರಿಂದ ಕ್ರೀಡೆಗೆ ಹೆಚ್ಚು ಉತ್ತೇಜನ ಸಿಗಲಿದೆ ಎಂದು ಎಐಬಿಎ ಅಧ್ಯಕ್ಷ ಚಿಂಗ್ ಕೂ ವು ಹೇಳಿದರು.
Related Articles
ಭಾರತಕ್ಕೆ ವಿಶ್ವ ಬಾಕ್ಸಿಂಗ್ ಆತಿಥ್ಯ ಭಾಗ್ಯ ಸಿಗುತ್ತಿದ್ದಂತೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಟ್ವೀಟ್ ಮಾಡಿದ್ದಾರೆ. ಗ್ರೇಟ್ ನ್ಯೂಸ್…ಬಾಕ್ಸಿಂಗ್ ಪ್ರೇಮಿಗಳಿಗೆ ಹಾಗೂ ಆಟಗಾರರಿಗೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮಹತ್ವದ ಕೂಟಗಳನ್ನು ಒಂದರ ಹಿಂದೆ ಒಂದರಂತೆ ಆಯೋಜಿಸುತ್ತಿದ್ದೇವೆ. ಎಐಬಿಎ ಅಧ್ಯಕ್ಷರು ಇಂತಹದೊಂದು ಮಹತ್ವದ ತೀರ್ಮಾನ ನಮಗಾಗಿ ತೆಗೆದು ಕೊಂಡಿದ್ದಾರೆ ಎಂದು ಭಾರತೀಯ ಬಾಕ್ಸಿಂಗ್ ಒಕ್ಕೂಟ ಅಜಯ್ ಸಿಂಗ್ ತಿಳಿಸಿದ್ದಾರೆ.
Advertisement
ಅಮಾನತಾಗಿದ್ದ ಭಾರತ2012ರಲ್ಲಿ ನೀತಿ ಸಂಹಿತೆ ರೂಪಿಸದೆ ಅರಾಜಕತೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಎಐಬಿಎ ಭಾರತೀಯ ಬಾಕ್ಸಿಂಗ್ ಒಕ್ಕೂಟವನ್ನು ಅಮಾನತು ಮಾಡಿತ್ತು. ಹೊಸದಾಗಿ ಚುನಾವಣೆ ನಡೆಸುವವರೆಗೆ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಭಾರತೀಯ ಬಾಕ್ಸರ್‌ಗಳು ಹಲವು ಕೂಟಗಳಲ್ಲಿ ಒಲಿಂಪಿಕ್ಸ್ ಧ್ವಜದಡಿ ಸ್ಪರ್ಧಿಸಬೇಕಾಗಿ ಬಂದಿತ್ತು. ಕಳೆದ ವರ್ಷವಷ್ಟೇ ಚುನಾವಣೆ ನಡೆದು ಪಾರದರ್ಶಕ ಆಡಳಿತ ತೋರಿಸಿದ ಅನಂತರ ಎಐಬಿಎ ಅಮಾನತು ಹಿಂದಕ್ಕೆ ತೆಗೆದುಕೊಂಡಿತ್ತು.