Advertisement

ಶಿವಣ್ಣ ಅಭಿಮಾನಿ ಸಂಘದಿಂದ 2020 ಕ್ಯಾಲೆಂಡರ್‌ ಬಿಡುಗಡೆ

10:07 AM Jan 20, 2020 | Lakshmi GovindaRaj |

ಪ್ರತಿವರ್ಷದಂತೆ ಈ ವರ್ಷವೂ ಡಾ. ರಾಜಕುಮಾರ್‌ ಮತ್ತು ಅವರ ಕುಟುಂಬದ ಅಪರೂಪದ ಚಿತ್ರಗಳನ್ನು ಹೊತ್ತ 2020ನೇ ಸಾಲಿನ ವರ್ಣರಂಜಿತ ಕ್ಯಾಲೆಂಡರ್‌ ಅನ್ನು ಅಖಿಲ ಕರ್ನಾಟಕ ಡಾ. ಶಿವರಾಜ್‌ಕುಮಾರ್‌ ಸೇನಾ ಸಮಿತಿ (ರಿ) ಬಿಡುಗಡೆ ಮಾಡಿದೆ.

Advertisement

12 ಪುಟಗಳ ಈ ಕ್ಯಾಲೆಂಡರ್‌ನಲ್ಲಿ ಡಾ. ರಾಜಕುಮಾರ್‌, ಪಾರ್ವತಮ್ಮ ರಾಜಕುಮಾರ್‌, ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಪುನೀತ್‌ ರಾಜಕುಮಾರ್‌ ಸೇರಿದಂತೆ ಡಾ. ರಾಜಕುಮಾರ್‌ ಕುಟುಂಬದ ಸದಸ್ಯರ ಅಪರೂಪದ ಚಿತ್ರಗಳನ್ನು ಸಂಗ್ರಹಿಸಿ ವಿಶೇಷವಾಗಿ ಪುಟಗಳನ್ನು ವಿನ್ಯಾಸ ಮಾಡಲಾಗಿದೆ.

ಅಖಿಲ ಕರ್ನಾಟಕ ಡಾ. ಶಿವರಾಜ್‌ಕುಮಾರ್‌ ಸೇನಾ ಸಮಿತಿ (ರಿ) ರಾಜ್ಯಾಧ್ಯಕ್ಷ ಟಿ. ನಾರಾಯಣ್‌ ಮತ್ತು ಪದಾಧಿಕಾರಿಗಳ ತಂಡ ಕಳೆದ ಹಲವು ವರ್ಷಗಳಿಂದ ಡಾ. ರಾಜಕುಮಾರ್‌ ವಿಶೇಷತೆಗಳನ್ನು ಹೊತ್ತ ಕ್ಯಾಲೆಂಡರ್‌ ಅನ್ನು ಹೊರತರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next