Advertisement
ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಮಿಥಾಲಿ ರಾಜ್ ಅವರ ಸತತ 2ನೇ ಅರ್ಧ ಶತಕದ ನೆರವಿನಿಂದ 6 ವಿಕೆಟಿಗೆ 146 ರನ್ ಗಳಿಸಿತು. ಅನನುಭವಿ ಐರ್ಲೆಂಡ್ 8 ವಿಕೆಟಿಗೆ 98 ರನ್ನನ್ನಷ್ಟೇ ಗಳಿಸಿತು. ಇದು ಪ್ರಸಕ್ತ ಕೂಟದಲ್ಲಿ ಕೌರ್ ಪಡೆಯ ಹ್ಯಾಟ್ರಿಕ್ ಗೆಲುವಾಗಿದ್ದು, ವಿಶ್ವಕಪ್ ಇತಿಹಾಸದಲ್ಲಿ ಭಾರತ ಕಾಣುತ್ತಿರುವ 3ನೇ ಸೆಮಿಫೈನಲ್ ಆಗಿದೆ. ಐರಿಷ್ ವನಿತೆಯರು ಸತತ 3ನೇ ಸೋಲುಂಡು ಹೊರಬಿದ್ದರು.
ಶನಿವಾರ ರಾತ್ರಿ ನಡೆಯುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಅಜೇಯವಾಗಿ ನಾಕೌಟ್ ತಲುಪಿವೆ. ಇದರ ಫಲಿತಾಂಶ “ಬಿ’ ವಿಭಾಗದ ಅಗ್ರಸ್ಥಾನಿಯನ್ನು ನಿರ್ಧರಿಸಲಿದೆ.
ಭಾರತ ಮತ್ತು ಆಸ್ಟ್ರೇಲಿಯ 3 ಜಯದೊಂದಿಗೆ 6 ಅಂಕಗಳನ್ನು ಹೊಂದಿವೆ. ಆದರೆ ರನ್‌ರೇಟ್‌ನಲ್ಲಿ ಕಾಂಗರೂ ಪಡೆಯೇ ಮುಂದಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತನ್ನ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್ ದೌರ್ಬಲ್ಯಗಳನ್ನು ಹೊಡೆದೋಡಿಸಬೇಕಾದ ಅಗತ್ಯವಿದೆ. ದೊಡ್ಡ ಮೊತ್ತ ಗಳಿಸುವ ಮೂಲಕ ಬ್ಯಾಟಿಂಗ್‌ನಲ್ಲೂ ಸುಧಾರಣೆ ಕಾಣಬೇಕಿದೆ.
Related Articles
ಐರಿಷ್ ಆರಂಭಿಕರು ಮೊದಲ 5 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ 27 ರನ್ ಒಟ್ಟುಗೂಡಿಸಿದರು. 6ನೇ ಓವರ್ ಎಸೆಯಲು ಬಂದ ದೀಪ್ತಿ ಶರ್ಮ ತಮ್ಮ ಮೊದಲ ಎಸೆತದಲ್ಲೇ ಲೆವಿಸ್ (9) ವಿಕೆಟ್ ಹಾರಿಸಿದರು. 15ನೇ ಓವರ್ ತನಕ ಎರಡೇ ವಿಕೆಟ್ ಕಳೆದುಕೊಂಡರೂ ರನ್‌ರೇಟ್‌ನಲ್ಲಿ ಐರ್ಲೆಂಡ್ ಬಹಳ ಹಿಂದಿತ್ತು. ರಾಧಾ ಯಾದವ್ (25ಕ್ಕೆ 3), ದೀಪ್ತಿ ಶರ್ಮ (15ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಹರ್ಮನ್‌ಪ್ರೀತ್ ಕೌರ್ ಮತ್ತು ಪೂನಂ ಯಾದವ್ 4 ಓವರ್‌ಗಳ ಪೂರ್ತಿ ಕೋಟಾದಲ್ಲಿ ಬರೀ 10 ಹಾಗೂ 14 ರನ್ ನೀಡಿ ಒಂದೊಂದು ವಿಕೆಟ್ ಕಿತ್ತರು.
Advertisement
ಐರ್ಲೆಂಡ್ ಸರದಿಯಲ್ಲಿ ಎರಡಂಕೆಯ ಸ್ಕೋರ್ ದಾಖಲಿಸಿದವರು ಶಿಲ್ಲಿಂಗ್ಟನ್ (23) ಮತ್ತು ಜಾಯ್ಸ (33) ಮಾತ್ರ.
ಸಂಕ್ಷಿಪ್ತ ಸ್ಕೋರ್: ಭಾರತ-6 ವಿಕೆಟಿಗೆ 145 (ಮಿಥಾಲಿ 51, ಮಂಧನಾ 33, ಜೆಮಿಮಾ 18, ಗಾರ್ತ್ 22ಕ್ಕೆ 2). ಐರ್ಲೆಂಡ್-8 ವಿಕೆಟಿಗೆ 93 (ಜಾಯ್ಸ 33, ಶಿಲ್ಲಿಂಗ್ಟನ್ 23, ರಾಧಾ 25ಕ್ಕೆ 3, ದೀಪ್ತಿ 15ಕ್ಕೆ 2). ಪಂದ್ಯಶ್ರೇಷ್ಠ: ಮಿಥಾಲಿ ರಾಜ್.