Advertisement

ಮಲ್ಟಿಪ್ಲೆಕ್ಸ್‌ಗಳಲ್ಲಿ  200 ರೂ.ಬದಲು ದುಪ್ಪಟ್ಟು ವಸೂಲಿ!

12:38 PM May 04, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶ ದರ ನೀತಿ ಜಾರಿಗೆ ತರುವ ಸಲುವಾಗಿ, 200 ರೂ. ಗರಿಷ್ಠ ಪ್ರವೇಶದರ ನಿಗದಿಪಡಿಸಿ ಹೊರಡಿಸಿರುವ ಆದೇಶವನ್ನು ಮಲ್ಟಿಪ್ಲೆಕ್‌ಗಳು ಪಾಲಿಸಿವೆಯೇ? ಇಂಥದ್ದೊಂದು ಪ್ರಶ್ನೆ ಬುಧವಾರ ಎಲ್ಲೆಡೆ ಕೇಳಿಬಂದಿದ್ದು ನಿಜ. ಆದರೆ, “ಬಾಹುಬಲಿ’
ಪ್ರದರ್ಶನಗೊಳ್ಳುತ್ತಿರುವ ಮಾಲ್‌ಗ‌ಳಲ್ಲಿ ಮಾತ್ರ ದುಪ್ಪಟ್ಟು ದರ ನಿಗದಿಪಡಿಸಿ, ಪ್ರದರ್ಶನ ಮಾಡಲಾಗಿದೆ.

Advertisement

ಸರ್ಕಾರ ಆದೇಶಿಸಿದ್ದರೂ, ಟಿಕೆಟ್‌ ದರ ಹೆಚ್ಚು ಪಡೆದ ಬಗ್ಗೆ ಸಿನಿಮಾಸಕ್ತರು ಪ್ರಶ್ನಿಸಿದರೆ, “ನಮ್ಮ ಕೈಯಲ್ಲಿ ಇನ್ನೂ
ಆದೇಶ ಪ್ರತಿ ತಲುಪಿಲ್ಲ. ಹಾಗಾಗಿ ನಾವು ನಿಗದಿಸಿರುವ ಪ್ರವೇಶ ದರದಲ್ಲೇ ಟಿಕೆಟ್‌ ವಿತರಿಸುವುದಾಗಿ’ ಮಾಲ್‌ನ
ಸಿಬ್ಬಂದಿವರ್ಗ ಹೇಳಿದೆ. ಓರಿಯನ್‌ ಮಾಲ್‌ ಹಾಗೂ ಮಂತ್ರಿ ಮಾಲ್‌ಗಳಲ್ಲಿ ಬುಧವಾರ ಪ್ರದರ್ಶನಗೊಂಡ ‘ಬಾಹುಬಲಿ’ ಚಿತ್ರಕ್ಕೆ 390 ಹಾಗೂ 420 ರೂ.ಗಳ ಟಿಕೆಟ್‌ ಪ್ರವೇಶ ದರ ಪಡೆಯಲಾಗಿದೆ. ಉಳಿದಂತೆ ಅನ್ಯ ಭಾಷೆ ಚಿತ್ರಗಳಾದ “ಫಾಸ್ಟ್‌ ಆ್ಯಂಡ್‌ ಫ್ಯೂರಿಸ್‌’, “ಸ್ಮರ¾ಫ್Õ ದಿ ಈವೆಂಟ್‌ ವಿಲೇಜ್‌’ ಮತ್ತು “ಪಾ ಪಾಂಡಿ’ ಚಿತ್ರಕ್ಕೆ 210, 230 ಹಾಗೂ 260 ರೂ.ಗಳ ಟಿಕೆಟ್‌ ದರ ಪಡೆಯಲಾಗಿದೆ. ಈ ಕುರಿತು ವಾರ್ತಾ ಇಲಾಖೆಯ ಅಧಿಕಾರಿಯೊಬ್ಬರು
ಸ್ಪಷ್ಟಪಡಿಸಿದ್ದೇನೆಂದರೆ, “ಈಗಾಗಲೇ ಸರ್ಕಾರದ ಆದೇಶವಾಗಿದೆ.

ಮಂಗಳವಾರ ರಾತ್ರಿ ಆದೇಶ ಆಗಿರುವುದರಿಂದ, ಬುಧವಾರ ಬೆಳಗ್ಗೆ ಎಲ್ಲಾ ಚಿತ್ರಮಂದಿರಗಳಿಗೂ ಇ-ಮೇಲ್‌ ಹಾಕಲಾಗಿದೆ, ಅದೂ ಅಲ್ಲದೆ, ಸಿಬ್ಬಂದಿ ಮೂಲಕ ಆದೇಶ ಪ್ರತಿ ತಲುಪಿಸಿ, ಆಯಾ ಚಿತ್ರಮಂದಿರದಿಂದ ಸ್ವೀಕೃತಿ ರಸೀದಿ ಪಡೆಯಲಾಗುತ್ತಿದೆ. ಬುಧವಾರ ಕೆಲವು ಕಡೆ ಆದೇಶ ಪಾಲನೆಯಾಗಿದೆ. ಇನ್ನು ಕೆಲವು ಕಡೆ ಆಗಿಲ್ಲವಾದರೂ, ಗುರುವಾರದಿಂದ ಕಟ್ಟುನಿಟ್ಟಾಗಿ ಅದನ್ನು ಪಾಲಿಸಬೇಕು. ಈಗಾಗಲೇ ಇಲಾಖೆಯು ಆ ಬಗ್ಗೆ ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next