Advertisement

ಬ್ರಿಟನ್ ನಿಂದ ಆಗಮಿಸಿದ 20 ಜನರಲ್ಲಿ ರೂಪಾಂತರಿತ ವೈರಸ್! ರಾಜ್ಯದಲ್ಲಿ ಮತ್ತೆ 4 ಪ್ರಕರಣ

09:36 AM Dec 30, 2020 | Team Udayavani |

ಹೊಸದಿಲ್ಲಿ: ರೂಪಾಂತರಿತ ವೈರಸ್ ಕಾಟ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ಪತ್ತೆಯಾಗಿದ್ದ ಆರು ಪ್ರಕರಣಗಳ ಸಂಖ್ಯೆ ಇದೀಗ 20ಕ್ಕೆ ಏರಿಕೆಯಾಗಿದೆ.

Advertisement

ರಾಜ್ಯದಲ್ಲಿ ಇಂದು ನಾಲ್ಕು ಹೊಸ ರೂಪಾಂತರಿ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದರಿಂದ ರಾಜ್ಯದಲ್ಲಿ ಏಳು ಪ್ರಕರಣಗಳು ಪತ್ತೆಯಾದಂತಾಗಿದೆ.

“ಈ ನಿರ್ದಿಷ್ಟ ವೈರಸ್ ತಳಿ ತನ್ನದೇ ಆದ ಓಟವನ್ನು ಹೊಂದಿರಬಹುದು. ಇದು ಈಗಾಗಲೇ ಅನೇಕ ದೇಶಗಳಿಗೆ ಪ್ರಯಾಣಿಸಿದೆ. ಆದ್ದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಆರಂಭದಲ್ಲಿ ಪ್ರಸರಣ ಸರಪಳಿ ಚಿಕ್ಕದಾದ ಕಾರಣ ವೈರಸ್ ಹರಡುವುದನ್ನು ನಿಗ್ರಹಿಸುವುದು ಸುಲಭ, ಎಂದು ನಿತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದರು.

ಮೊದಲು ದೇಶಲದಲ್ಲಿ ಜನರಿಗೆ ಈ ರೂಪಾಂತರಿತ ಸೋಂಕು ತಾಗಿರುವುದು ಪತ್ತೆಯಾಗಿತ್ತು. ನಂತರ ಲಂಡನ್ ನಿಂದ ಮೀರತ್ ಗೆ ಆಗಮಿಸಿದ ಎರಡು ವರ್ಷದ ಬಾಲೆಗೆ ಸೋಂಕು ತಾಗಿರುವುದು ದೃಢವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next