ಬೆಂಗಳೂರು: ತುರ್ತು ಪರಿಸ್ಥಿತಿಯಲ್ಲಿ ಇಬ್ಬರು ರೋಗಿಗಳನ್ನು ಏಕಕಾಲದಲ್ಲಿ ಹೊತ್ತೂಯ್ಯುವ ಭಾರತದ ಮೊದಲ ಆತ್ಯಾಧುನಿಕ ಏರ್ ಆ್ಯಂಬುಲೆನ್ಸ್‌ನುಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಿದಟಛಿಪಡಿಸಿದ್ದು, ಈ ಏರ್ ಆ್ಯಂಬುಲೆನ್ಸ್‌ಗಳು ಮುಂಬರುವ ಜುಲೈನಲ್ಲಿ ಭಾರತೀಯ ಸೇನೆ ಸೇರಲಿವೆ.
ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ತ್ವರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಏರ್ ಆ್ಯಂಬುಲೆನ್ಸ್ ಸೇವೆ ಸೇನಾವಲಯ ಹಾಗೂ ಕೆಲ ಉನ್ನತ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆದರೆ, ಪ್ರಸ್ತುತ ಇರುವ ಏರ್ ಆ್ಯಂಬುಲೆನ್ಸ್‌ನಲ್ಲಿ ಒಮ್ಮೆಗೆ ಒಬ್ಬ ರೋಗಿಯನ್ನು ಮಾತ್ರ ಆಸ್ಪತ್ರೆಗೆ ಸಾಗಿಸಬಹುದು. ಜತೆಗೆ, ಅದರಲ್ಲಿ ಐಸಿಯುನಂತಹ ಅತ್ಯಾಧುನಿಕ ಸೌಲಭ್ಯಗಳ ಕೊರತೆ ಇದೆ. ಈಗ ಎಚ್‌ಎಎಲ್‌ನ ವೈದ್ಯಕೀಯ ತೀವ್ರ ನಿಗಾ ಘಟಕ (ಮೆಡಿಕಲ್ ಇನ್‌ಟೆನ್ಸಿವ್ ಕೇರ್ ಯುನಿಟ್) ಈ ಆ್ಯಂಬುಲೆನ್ಸ್‌ಗಳ ಸಾಮರ್ಥ್ಯ ಹಾಗೂ ಸೌಲಭ್ಯವನ್ನು ಹೆಚ್ಚಿಸಿದ್ದು, ಏಕಕಾಲದಲ್ಲಿ ಇಬ್ಬರು ರೋಗಿಗಳನ್ನು ಪ್ರಥಮ ಚಿಕಿತ್ಸೆಯೊಂದಿಗೆ ಆಸ್ಪತ್ರೆಗೆ ಸಾಗಿಸಬಹುದಾಗಿದೆ. ಇವು, ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಏನೆಲ್ಲಾ ಇದೆ?
ಇಬ್ಬರು ರೋಗಿಗಳನ್ನು ಮಲಗಿಸಲು ಎರಡು ಸ್ಟ್ರೆಚರ್, ಒಬ್ಬರು ವೈದ್ಯರು ಹಾಗೂ ಒಬ್ಬ ಸಹಾಯಕ ಸಿಬ್ಬಂದಿ ಕೂರುವ ಕುರ್ಚಿ, ರೋಗಿಗೆ ಹೃದಯಾಘಾತವಾಗಿದ್ದರೆ ಶಾಕ್ ಚಿಕಿತ್ಸೆ ಕೊಡಲು ಎರಡು ಡಿಫಿಬ್ರಿಲೇಟರ್ ಯಂತ್ರಗಳಿವೆ. ಉಸಿರಾಟಕ್ಕೆ ಅನುಕೂಲವಾಗಲು ಎರಡು ವೆಂಟಿಲೇಟರ್, 2 ಇನ್ ಪ್ಯೂಷನ್ ಪಂಪ್, 2 ಸಿರಿಂಜ್ ಪಂಪ್ ಇವೆ. ಬಹುತೇಕ ಆಸ್ಪತ್ರೆಗಳಲ್ಲಿನ ತುರ್ತು ನಿಗಾ ಘಟಕ (ಐಸಿಯು)ದಲ್ಲಿರುವ ಎಲ್ಲಾ ಸೌಲಭ್ಯಗಳು ಈ ಆ್ಯಂಬುಲೆನ್ಸ್‌ನಲ್ಲಿವೆ. ಜತೆಗೆ, ಫೈನ್‌ಬೋರ್ಡ್ ಸೌಲಭ್ಯವಿದ್ದು, ಬೆನ್ನಿನ ಸಮಸ್ಯೆಯಾಗಿದ್ದರೆ ರೋಗಿಗೆ ಇದು ನೆರವಾಗಲಿದೆ. ಹೆಲಿಕಾಪ್ಟರ್ ಹಿಂಬದಿ ಬಾಗಿಲ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಿದ್ದು, ಸುಲಭವಾಗಿ ರೋಗಿಗಳನ್ನು ಸ್ಟ್ರೆಚರ್ ಸಮೇತ ಇಳಿಸಬಹುದು ಎಂದು ಎಚ್‌ಎಎಲ್ ವೈದ್ಯರೊಬ್ಬರು ತಿಳಿಸಿದರು.
ಮೇಕ್ ಇಂಡಿಯಾದಡಿ ಈ ಏರ್ ಆ್ಯಂಬುಲೆನ್ಸ್ ತಯಾರಿಸಲಾಗುತ್ತಿದೆ. ಈಗ ಮಾದರಿಯೊಂದನ್ನು ಸಿದ್ದಪಡಿಸಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದು, ಮುಂಬರುವ ಜುಲೈನಲ್ಲಿ ಎಲ್ಲಾ ಸೇನಾ ವಲಯಗಳಿಗೂ ಹಸ್ತಾಂತರ ಮಾಡಲಾಗುವುದು.
ನಂತರ ನಾಗರೀಕ ಸೇವೆಗೂ ಉತ್ಪಾದನೆ ಆರಂಭಿಸಿ, ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ನೀಡಲು ಚಿಂತನೆ ನಡೆದಿದೆ. ಹೆಲಿಕಾಪ್ಟರ್ ನಿರ್ಮಿಸುವ ಎಚ್‌ಎಎಲ್ ಸಂಸ್ಥೆಯೇ ಇದನ್ನು ತಯಾರಿಸುತ್ತಿರುವುದರಿಂದ ಪ್ರಸ್ತುತ ಒಬ್ಬ ರೋಗಿ ಸ್ಥಳಾಂತರಿಸುವ ಏರ್ ಆ್ಯಂಬಲೆನ್ಸ್ ದರಕ್ಕಿಂತ ಶೇ.30ರಷ್ಟು ಅಗ್ಗವಾಗಲಿದೆ ಎಂದು ಎಚ್‌ಎಎಲ್ ಮೆಡಿಕಲ್ ಇನ್ ಟೆನ್ಸಿವ್ ಕೇರ್ ಯುನಿಟ್ ಅಧಿಕಾರಿಗಳ ತಂಡ ತಿಳಿಸಿತು.