ವಿಶಾಖಪಟ್ಟಣ: ಶುಕ್ರ ವಾರ ಇಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದ ಆಟಗಾರರು ಕಠಿನ ಅಭ್ಯಾಸ ನಡೆಸಿದರು. ಬ್ಯಾಟರ್‌ಗಳು ತಮ್ಮ ಸಾಂಪ್ರದಾಯಿಕ ಶೈಲಿಯ ಜತೆಗೆ ರಿವರ್ಸ್ ಸ್ವೀಪ್ ಅಭ್ಯಾಸದಲ್ಲಿ ನಿರತರಾಗಿದ್ದುದು ಕಂಡುಬಂತು.
ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮ ಹೊರತುಪಡಿಸಿ ಉಳಿದ ಬ್ಯಾಟರ್ ಸ್ವೀಪ್ ಶಾಟ್‌ಗೆ ಪ್ರಯತ್ನಿ
ಸರ ಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಲೆಂಡ್ ಕ್ರಿಕೆಟಿಗರು ಇದರಲ್ಲಿ ಭರ್ಜರಿ ಯಶಸ್ಸು ಕಂಡರು. ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಶಾಟ್‌ಗಳೇ ಆಂಗ್ಲರ ಪ್ರಧಾನ ಅಸ್ತ್ರವಾಗಿದ್ದನ್ನು ಗಮನಿಸಬಹುದಿತ್ತು. ಇದರಿಂದ ಭಾರತದ “ಚಾಂಪಿಯನ್ ಸ್ಪಿನ್ನರ್’ ಕೂಡ ದಿಕ್ಕು ತಪ್ಪಿದರು.
ಅಪರಾಹ್ನ ನಡೆದ ಮೊದಲ ಸುತ್ತಿನ ಅಭ್ಯಾಸದ ವೇಳೆ ಶುಭಮನ್ ಗಿಲ್ ಕಠಿನ ಅಭ್ಯಾಸ ನಡೆಸಿದರು. ರನ್ ಗಳಿಸಲು ಪರದಾಡುತ್ತಿರುವ ಅವರು ತಮ್ಮ ಸಾಂಪ್ರದಾಯಿಕ ಹೊಡೆತಗಳ ಜತೆಗೆ ರಿವರ್ಸ್ ಸ್ವೀಪ್ ಹೊಡೆತಕ್ಕೂ ಮುಂದಾದರು. ಆದರೆ ಬಹುತೇಕ ಬ್ಯಾಟರ್ ರಿವರ್ಸ್ ಸ್ವೀಪ್‌ನಲ್ಲಿ ನಿರೀಕ್ಷಿತ ಮಟ್ಟ ತಲುಪದಿದ್ದುದು ಗೋಚರಕ್ಕೆ ಬಂತು. ಆದರೆ ಹೈದರಾ ಬಾದ್‌ನಲ್ಲಿ ನಡೆಸಿದ ಸ್ವೀಪ್ ಶಾಟ್ ಅಭ್ಯಾಸ ಕ್ಕಿಂತಲೂ ಉತ್ತಮ ಮಟ್ಟದಲ್ಲಿತ್ತು.
“ಸ್ವೀಪ್ ಶಾಟ್ ಅಷ್ಟು ಸುಲಭದಲ್ಲಿ ಒಲಿಯದು. ಇದಕ್ಕೆ ಕಠಿನ ಅಭ್ಯಾಸ ಅಗತ್ಯ’ ಎಂಬುದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೊಡ್ ಅಭಿಪ್ರಾಯವಾಗಿತ್ತು.
ಟೆಸ್ಟ್ ಪದಾರ್ಪಣೆಯ ನಿರೀಕ್ಷೆ ಯಲ್ಲಿ ರುವ ಸಫìರಾಜ್ ಖಾನ್ ಮತ್ತು ರಜತ್ ಪಾಟಿದಾರ್ ಬ್ಯಾಟಿಂಗ್ ಜತೆಗೆ ಕ್ಯಾಚಿಂಗ್ ಅಭ್ಯಾಸವನ್ನೂ ನಡೆಸಿದರು. ಇದೇ ವೇಳೆ ಇಂಗ್ಲೆಂಡ್‌ನ ಜೋ ರೂಟ್ ಎಡಗೈ ಬ್ಯಾಟಿಂಗ್ ಅಭ್ಯಾಸ ನಡೆಸುವ ಮೂಲಕ ಗಮನ ಸೆಳೆದರು.