Advertisement

30 ನಿಮಿಷದೊಳಗೆ 2 ಪದಕ ಗೆದ್ದ ವಿಜಯ!

07:30 AM Mar 07, 2018 | Team Udayavani |

ಪಟಿಯಾಲ: ಇಪ್ಪತ್ತೆರಡನೇ ಫೆಡರೇಷನ್‌ ಕಪ್‌ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಅಥ್ಲೀಟ್‌ ವಿಜಯ ಕುಮಾರಿ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ 2 ಪದಕ ಗೆದ್ದಿದ್ದಾರೆ.ಕಪ್‌ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಅಥ್ಲೀಟ್‌ ವಿಜಯ ಕುಮಾರಿ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ 2 ಪದಕ ಗೆದ್ದಿದ್ದಾರೆ.

Advertisement

400 ಮೀ.ನಲ್ಲಿ ಬೆಳ್ಳಿ ಹಾಗೂ 800 ಮೀ.ನಲ್ಲಿ ಕಂಚಿನ ಪದಕ ಪಡೆದುಕೊಂಡರು. ಎರಡೂ ಫೈನಲ್‌ ಓಟವು ಕೇವಲ 30 ನಿಮಿಷದ
ಅಂತರದಲ್ಲಿ ನಡೆಯಿತು. ಎರಡರಲ್ಲೂ ವೈಯಕ್ತಿಕ ದಾಖಲೆಯೊಂದಿಗೆ ವಿಜಯ ಪದಕ ಗೆದ್ದದ್ದು ವಿಶೇಷ. ಪೂವಮ್ಮಗೆ ವಿಜಯ ಶಾಕ್‌: ವಿಜಯ ಕುಮಾರಿ ಮೊದಲು 400 ಮೀ.ನಲ್ಲಿ ಓಡಿ 53.03 ಸೆಕೆಂಡ್ಸ್‌ನಲ್ಲಿ ಬೆಳ್ಳಿ ಪದಕ ಪಡೆದುಕೊಂಡರು. ದೈತ್ಯ ಓಟಗಾರ್ತಿ
ಕರ್ನಾಟಕ ಎಂ.ಆರ್‌.ಪೂವಮ್ಮ ಅವರನ್ನು ಹಿಂದಿಕ್ಕಿ ದಾಖಲೆ ಬರೆದರು. ಪೂವಮ್ಮ 53.38 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಕಂಚಿನ  ಪದಕ ಗೆದ್ದರು. 51.97 ಸಕೆಂಡ್ಸ್‌ನಲ್ಲಿ ಗುರಿ ತಲುಪಿದ ಹಿಮ ದಾಸ್‌ ಚಿನ್ನದ ಪದಕ ಪಡೆದುಕೊಂಡರು. 800 ಮೀ.ನಲ್ಲಿ ಕಂಚು: 400 ಮೀ.ನಲ್ಲಿ ಓಡಿ ಗೆದ್ದ ಬಳಿಕ ವಿಜಯ ಕುಮಾರಿ ಮುಂದೆ ಇದ್ದದ್ದು ಅರ್ಧ ಗಂಟೆ ಸಮಯ. ಇದರೊಳಗೆ ವಿಜಯ ಕುಮಾರಿ 800 ಮೀ. ಓಟವನ್ನು ಯಶಸ್ವಿಯಾಗಿ ಕಂಚಿನ ಪದಕದೊಂದಿಗೆ ಮುಗಿಸಿದರು. ವಿಜಯ ಸಾಯ್‌ ಕೋಚ್‌ ಡಾ.ಲಕ್ಷ್ಮೀಶ ಅವರಿಂದ ತರಬೇತಿ
ಪಡೆಯುತ್ತಿದ್ದಾರೆ. ಡಿಸ್ಕಸ್‌ನಲ್ಲಿ ಸೀಮಾಗೆ ಕಾಮನ್ವೆಲ್ತ್‌ ಅರ್ಹತೆ ಮಹಿಳಾ ಡಿಸ್ಕಸ್‌ ಥ್ರೋನಲ್ಲಿ ಸೀಮಾ ಪೂನಿಯಾ ಚಿನ್ನದ ಪದಕದೊಂದಿಗೆ ಕಾಮನ್ವೆಲ್ತ್‌ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಪುರುಷರ ವಿಭಾಗದ ಪೋಲ್‌ವಾಲ್ಟ್ನಲ್ಲಿ ತಮಿಳುನಾಡಿನ ಸುಬ್ರಹ್ಮಣಿ ಶಿವ ತಮ್ಮದೇ ಹೆಸರಿನ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.

ಸೀಮಾಗೆ 4ನೇ ಕಾಮನ್ವೆಲ್ತ್‌ ಭಾಗ್ಯ: 34 ವರ್ಷದ ಹರ್ಯಾಣದ ಸೀಮಾ ಪೂನಿಯಾ ಡಿಸ್ಕಸ್‌ ಥ್ರೋನಲ್ಲಿ 59 ಮೀ. ದೂರ ಎಸೆದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್ವೆಲ್ತ್‌ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸೀಮಾ ಅವರಿಂದ ಹೊರಹೊಮ್ಮಿದ ಅತ್ಯುತ್ತಮ ಪ್ರದರ್ಶನವಿದು. ಸೀಮಾ ಮೊದಲ ಬಾರಿಗೆ 2006ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. 2010ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚು, 2014ರ ಗ್ಲಾಸೊY ಕಾಮನ್ವೆಲ್ತ್‌
ಗೇಮ್ಸ್‌ನಲ್ಲಿ ಬೆಳ್ಳಿ ಪಡೆದುಕೊಂಡಿದ್ದರು. 

ದಾಖಲೆ ಹೊರತಾಗಿಯೂ ನಿರಾಸೆ: ಪೋಲ್‌ವಾಲ್ಟ್ ನಲ್ಲಿ ಸುಬ್ರಹ್ಮಣಿ 5.15 ಮೀ. ಎತ್ತರಕ್ಕೆ ಜಿಗಿದರು. ತನ್ನದೇ ಹೆಸರಿನಲ್ಲಿ ಹಿಂದೆ ದಾಖಲಾಗಿದ್ದ 5.14 ಮೀ. ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡರು. ದಾಖಲೆಯ ಹೊರತಾಗಿಯೂ ಅವರು ಕಾಮನ್ವೆಲ್ತ್‌
ಗೇಮ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಕಾಮನ್ವೆಲ್ತ್‌ಗೆ ಅರ್ಹತಾ ಮಾನದಂಡ 5.45 ಮೀ. ಆಗಿದೆ.

ರಾಜ್ಯದ ಪ್ರಜ್ಞಾಗೆ ಬೆಳ್ಳಿ
ಫೆಡರೇಷನ್‌ ಕಪ್‌ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 100 ಮೀ. ಓಟದಲ್ಲಿ ಕರ್ನಾಟಕ ಪ್ರಜ್ಞಾ ಬೆಳ್ಳಿ
ಪದಕ ಪಡೆದುಕೊಂಡಿದ್ದಾರೆ. ಅತ್ಯುತ್ತಮ ನಿರ್ವಹಣೆ ನೀಡಿದ ಪ್ರಜ್ಞಾ ಸ್ವಲ್ಪದರಲ್ಲೇ ಚಿನ್ನದ ಪದಕದಿಂದ ವಂಚಿತರಾಗಿ ನಿರಾಸೆ
ಅನುಭವಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next