ಹೊಸದಿಲ್ಲಿ: ಭವಿಷ್ಯದ ಕ್ರೀಡಾಪಟುಗಳನ್ನು ರೂಪಿಸಲು ಮುಂದಾಗಿರುವ ದೇಶದ ಕ್ರೀಡಾ ತರಬೇತುದಾರರ ಮಾಸಿಕ ವೇತನವನ್ನು ಎರಡು ಲಕ್ಷ ರೂ.ಗೆ ಏರಿಸಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ.
ಏಲೈಟ್ ಆ್ಯತ್ಲೀಟ್‌ಗಳನ್ನು ಉತ್ತೇಜಿಸಲು, ಇನ್ನಷ್ಟು ಮಂದಿ ಉನ್ನತ ದರ್ಜೆಯ ತರಬೇತುದಾರರನ್ನು ಇತ್ತ ಸೆಳೆಯುವಂತೆ ಮಾಡಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದರು.
ಎಲ್ಲ ವಿದೇಶಿ ತರಬೇತುದಾರರ ಒಪ್ಪಂದವನ್ನು ಮುಂದಿನ ವರ್ಷದ ಸೆ. 30ರ ತನಕ ವಿಸ್ತರಿಸುವ ನಿರ್ಧಾರ ತೆಗೆದುಕೊಂಡ ಎರಡೇ ದಿನಗಳಲ್ಲಿ ವೇತನ ಏರಿಕೆಯ ಘೋಷಣೆ ಹೊರಬಿದ್ದಿದೆ.
“ಭಾರತದ ಅನೇಕ ತರಬೇತುದಾರರು ಕಠಿನ ಪರಿಶ್ರಮ ವಹಿಸಿ ಕ್ರೀಡಾಪಟುಗಳನ್ನು ಸ್ಪರ್ಧೆಗೆ ಸಿದ್ಧಗೊಳಿಸುತ್ತಿದ್ದಾರೆ.
ಏಲೈಟ್ ಆ್ಯತ್ಲೀಟ್‌ಗಳಿಗೆ ಇನ್ನಷ್ಟು ಉತ್ತಮ ದರ್ಜೆಯ ತರಬೇತಿ ಲಭಿಸುವ ಸಲುವಾಗಿ ಅಷ್ಟೇ ಉತ್ತಮ ಮಟ್ಟದ ತರಬೇತುದಾರರ ಅಗತ್ಯವಿದೆ. ಇವರನ್ನು ಇತ್ತ ಆಕರ್ಷಿಸಲು ಹಾಗೂ ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ’ ಎಂದು ರಿಜಿಜು ತಿಳಿಸಿದರು.