Advertisement

ಪಾಕ್‌ ಕಾಪ್ಟರ್‌ ಛೇದನಕ್ಕೆ ಹಾರಿತ್ತು 2 ಮಿಗ್‌-21 ವಿಮಾನ

06:00 AM Oct 02, 2018 | |

ಇಸ್ಲಾಮಾಬಾದ್‌ / ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ವಲಯದಲ್ಲಿ ಭಾರತೀಯ ವಾಯು ಪ್ರದೇಶವನ್ನು ಅಕ್ರಮವಾಗಿ ಪ್ರವೇಶ ಮಾಡಿದ್ದ ಪಾಕಿಸ್ಥಾನ ಹೆಲಿ ಕಾಪ್ಟರ್‌ ಛೇದಿಸಲು 2 ಮಿಗ್‌-21 ವಿಮಾನಗಳನ್ನು ಕಳುಹಿಸಲಾಗಿತ್ತು. ಈ ಮಾಹಿತಿಯನ್ನು ದಿಲ್ಲಿಯಲ್ಲಿ ಸೋಮವಾರ ವಾಯುಪಡೆ (ಐಎಎಫ್) ಮೂಲಗಳು ಖಚಿತಪಡಿ ಸಿವೆ. ಶ್ರೀನಗರದ ಸಮೀಪದಲ್ಲೇ ಇರುವ ಭಾರತೀಯ ವಾಯುಪಡೆ (ಐಎಎಫ್) ನೆಲೆಯಲ್ಲಿರುವ ರಾಡಾರ್‌ಗೆ ಭಾರತದ ವಾಯು ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಹೆಲಿಕಾಪ್ಟರ್‌ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸೇನಾ ಪಡೆಗಳು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರೂ ಅದನ್ನು ಛೇದಿಸುವ ಮತ್ತು ಕಾಪ್ಟರ್‌ ಬಗ್ಗೆ  ಹೆಚ್ಚಿನ ಮಾಹಿತಿ ತಿಳಿಯುವ ನಿಟ್ಟಿನಲ್ಲಿ ಎರಡು ಮಿಗ್‌ 21 ಯುದ್ಧ ವಿಮಾನಗಳನ್ನು ತತ್‌ಕ್ಷಣವೇ ಕಳುಹಿಸಿಕೊಡಲಾಯಿತು. ಅದೇ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಭಾಗಕ್ಕೆ ವಾಪಸಾಯಿತು ಎಂದು ಐಎಎಫ್ ಮೂಲಗಳು ತಿಳಿಸಿವೆ.

Advertisement

ಪಾಕ್‌ ಮಿತಿಯಲ್ಲೇ ಇತ್ತು
ಇದೇ ವೇಳೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಪಾಕಿಸ್ಥಾನ ಮುಸ್ಲಿಂ ಲೀಗ್‌-ನವಾಜ್‌ ನಾಯಕ ರಾಜಾ ಫಾರೂಕ್‌ ಹೈದರ್‌, ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಸನಿಹದಲ್ಲಿ ಹಾರಾಟ ನಡೆಸುತ್ತಿದ್ದರೂ ಪಾಕಿಸ್ಥಾನದ ವಾಯುಗಡಿಯಲ್ಲೇ ಕಾಪ್ಟರ್‌ ಇತ್ತು ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಪಾಕಿಸ್ಥಾನ ಮತ್ತೆ ಸುಳ್ಳಿನ ಮೊರೆಹೋಗಿದೆ. ನಮ್ಮದು ಸೇನಾ ಕಾಪ್ಟರ್‌ ಆಗಿರಲಿಲ್ಲ. ಹೀಗಾಗಿ ಭಾರ ತೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿರಲಿಲ್ಲ ಎಂದು ಹೈದರ್‌ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಜತೆಗೆ ಇನ್ನೂ ಇಬ್ಬರು ನಾಯಕರು ಪ್ರಯಾಣಿಸುತ್ತಿದ್ದರು ಎಂದಿದ್ದಾರೆ.

ಕ್ರಮಕ್ಕೆ ಉಪ ರಾಷ್ಟ್ರಪತಿ ಒತ್ತಾಯ
ವಿಶ್ವಕ್ಕೆ ಸವಾಲಾಗಿರುವ ಭಯೋ ತ್ಪಾದಕ ಕೃತ್ಯಗಳನ್ನು ತಡೆಗಟ್ಟಲು ವಿಶ್ವ ಸಂಸ್ಥೆ ಕಠಿನ ನಿಯಮ ಹಾಗೂ ಕ್ರಮ ಗಳನ್ನು ಜಾರಿಗೆ ತರಬೇಕಾಗಿದೆ. ಅದನ್ನು ಪ್ರಾಯೋಜಿಸುವವರ ವಿರುದ್ಧವೂ ನಿಯಂತ್ರಣ ಹೇರಬೇಕಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ದಿಲ್ಲಿಯಲ್ಲಿ ಮಾತ ನಾಡಿದ ಅವರು ಪರೋಕ್ಷವಾಗಿ ಪಾಕಿಸ್ಥಾನವನ್ನು ಪ್ರಸ್ತಾವಿಸಿದ್ದಾರೆ. “ಭಯೋ ತ್ಪಾದನೆ ಎನ್ನುವುದು ಮಾನವತೆಯ ವಿರೋಧಿ. ಕೆಲವೊಂದು ಶಕ್ತಿಗಳು ಧರ್ಮದ ಹೆಸರಿನಲ್ಲಿ ಅದರನ್ನು ಪಸರಿಸುತ್ತಿವೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next