Advertisement

ರಾಜ್ಯದಲ್ಲಿ 2 ಭೀಕರ ಅಪಘಾತಗಳು : 14 ಮಂದಿ ದಾರುಣ ಸಾವು 

02:14 AM Mar 23, 2019 | |

ವಿಜಯಪುರ/ಸಿಂದಗಿ: ಸಾವಿನ ಹೆದ್ದಾರಿ ಎಂದೇ ಕುಖ್ಯಾತಿ ಪಡೆದಿರುವ ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ-218ರ ಚಿಕ್ಕಸಿಂದಗಿ ಬಳಿ ಶುಕ್ರವಾರ ನಸುಕಿನ ಜಾವ ಕ್ರೂಸರ್‌ ಹಾಗೂ ಕ್ಯಾಂಟರ್‌ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, 6 ಜನರು ಗಂಭೀರ ಗಾಯಗೊಂಡಿದ್ದಾರೆ.

Advertisement

ಗೋವಾ ಪ್ರವಾಸ ಮುಗಿಸಿ ಮರಳಿ ಕಲಬುರಗಿ ಜಿಲ್ಲೆಯ ಚಿತ್ತಾಪುರಕ್ಕೆ ಹೊರಟಿದ್ದ ಪ್ರವಾಸಿಗರಿದ್ದ ಕ್ರೂಸರ್‌ ಹಾಗೂ ವಿಜಯಪುರ ಕಡೆಗೆ ಹೊರಟಿದ್ದ ಕ್ಯಾಂಟರ್‌ ಮಧ್ಯೆ ಶುಕ್ರವಾರ ಬೆಳಗ್ಗೆ 5:30ಕ್ಕೆ ಚಿಕ್ಕಸಿಂದಗಿ ಹೊರ ವಲಯದಲ್ಲಿ ಮುಖಾಮುಖೀ ಆಪಘಾತ ಸಂಭವಿಸಿದೆ. ಆಪಘಾತದ ಭೀಕರತೆಗೆ ಕ್ರೂಸರ್‌ನಲ್ಲಿದ್ದ 8 ಜನರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ. ಕಬ್ಬಿಣದ ಸರಳುಗಳ ಮಧ್ಯೆ ಸಿಕ್ಕಿಕೊಂಡಿದ್ದ ಹಲವರ ಶವಗಳನ್ನು ಪ್ರಯಾಸದಿಂದ ಹೊರ ತೆಗೆಯಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಿಸದೇ ಓರ್ವ ಮೃತಪಟ್ಟಿದ್ದಾನೆ.

ಮೃತರೆಲ್ಲರೂ ಚಿತ್ತಾಪುರ ಪಟ್ಟಣದ ಕ್ರೂಸರ್‌ ಚಾಲಕ ಶ್ರೀನಾಥ ಈಶ್ವರಪ್ಪ ನಾಲವಾರ (25), ಅಂಬರೀಷ್‌ ಲಕ್ಷ್ಮಣ ದೊರೆ (30), ಯೂನುಸ್‌ ಸರ್ವರಪಟೇಲ್‌ ಕಡಬೂರ (25), ಸಾಗರ ಶಂಕ್ರಪ್ಪ ದೊಡಮನಿ (22), ಚಾಂದ ಮಶ್ಯಾಕಸಾಬ ಮುಜಾವರ (24), ಗುರುರಾಜ ಸಾಬಣ್ಣ ಹಕೀಂ (35), ಶಾಕೀರ್‌ ಅಬ್ದುಲ್‌ ರಹೀಮ್‌ ಶೇಖ (27), ಅಜೀಮ್‌ ಅಬ್ದುಲ್‌ ರಹೀಂ ಶೇಖ (35) ಹಾಗೂ ಮೂನ್ಸುಫ್‌ ಸರ್ವರ ಪಟೇಲ್‌ ಕಡಬೂರ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಂಜೂರ ಸರ್ವರಸಾಬ ಕಡಬೂರ (32), ಆಕಾಶ ಲಕ್ಷ್ಮಣ ದೊರೆ (20), ಮಲ್ಲಿಕಾರ್ಜುನ ಬಸವರಾಜ ಜಮಾದಾರ (29), ಸದ್ದಾಂ (25) ಹಾಗೂ ಕ್ಯಾಂಟರ್‌ ಚಾಲಕ ಸೀಮಾಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡಪಲ್ಲಿಗುಡಂನ ಸೋಪೇಠಿ ಆನಂದ ನಾಗೇಶ್ವವರರಾವ್‌ (25) ಹಾಗೂ ಕ್ಲೀನರ್‌ ಸಾಜೀದ್‌ ಇಸ್ಮಾಯಿಲ್‌ ಖದರಬಾಬು (22) ಅವರನ್ನು ಸಿಂದಗಿ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

 5 ಮಂದಿ ಸಾವು
 ನಾಗಮಂಗಲ:
ಪ್ಯಾಸೆಂಜರ್‌ ಆಟೋಗೆ ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಸುಂಕನಹಳ್ಳಿ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಈ ದುರ್ಘ‌ಟನೆಯಲ್ಲಿ ಪ್ಯಾಸೆಂಜರ್‌ ಆಟೋ ಚಾಲಕ ಸತೀಶ್‌, ಕಾಳೇನಹಳ್ಳಿ ಅರಸಮ್ಮ, ಕಾಂತಾಪುರದ ಬೋರಲಿಂಗ, ಸುರೇಶ್‌ ಹಾಗೂ ಸುಖಧರೆ ಗ್ರಾಮದ ಕುಮಾರ ಎಂಬವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬಸವಶೆಟ್ಟಿ, ಪುಟ್ಟ ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ನಾಗಮಂಗಲ ಕಡೆಯಿಂದ ಬೋಗಾದಿ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋಗೆ ನಾಗಮಂಗಲ ಕಡೆಗೆ ಬರುತ್ತಿದ್ದ ಬಾಲಾಜಿ ಕನ್‌ಸ್ಟ್ರಕ್ಷನ್‌ಗೆ ಸೇರಿದ ಟಿಪ್ಪರ್‌ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪ ಘಾತಕ್ಕೊಳಗಾದ ಲಾರಿಯನ್ನು ರಸ್ತೆಯಿಂದ ತೆರವುಗೊಳಿ ಸುವ ಪ್ರಯತ್ನಕ್ಕೆ ಪೊಲೀಸರು ಮುಂದಾದರಾದರೂ, ಸ್ಥಳೀಯರು ಅವಕಾಶ ನೀಡಲಿಲ್ಲ. ಸ್ಥಳದಲ್ಲಿ ಪ್ರತಿಭಟನೆ
ನಡೆಸುತ್ತಿರುವುದರಿಂದ ಬಿಗುವಿನ ವಾತಾವರಣ ನೆಲೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next