Advertisement

ಕಳ್ಳಸಾಗಣೆ ಉದ್ದೇಶದ 23 ಲಕ್ಷ ವಿದೇಶಿ ಕರೆನ್ಸಿ ವಶ; ಇಬ್ಬರ ಸೆರೆ

07:27 PM May 05, 2018 | Team Udayavani |

ಹೊಸದಿಲ್ಲಿ : ದುಬೈಗೆ ಪ್ರಯಾಣಿಸಲಿದ್ದ ಇಬ್ಬರು ವ್ಯಕ್ತಿಗಳನ್ನು ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಅವರ ಬಳಿ ಇದ್ದ ಕಳ್ಳ ಸಾಗಣೆ ಉದ್ದೇಶದ 23.33 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ವಶಕ್ಕೆ ತೆಗೆದುಕೊಂಡರು.

Advertisement

ಬಂಧಿತರನ್ನು ಎಸ್‌ ಖಾನ್‌ ಮತ್ತು ಜಾವೇದ್‌ ಅಲಿ ಎಂದು ಗುರುತಿಸಲಾಗಿದೆ. ತಮ್ಮ ಕೈಚೀಲದಲ್ಲಿನ ಆಹಾರ ಪೊಟ್ಟಣಗಳ ಅಡಿ ಕಪ್ಪು ಟೇಪಿನ ಪೊಟ್ಟಣಗಳು ಇರುವುದನ್ನು ಗಮನಿಸಿದ ಸಿಐಎಸ್‌ಎಫ್ ಸಿಬಂದಿಗಳು ಅದನ್ನು ತೆರೆದು ನೋಡಿದಾಗ 23.33 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳು ಕಂಡು ಬಂದವು ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next