Advertisement

ಸಿಎಂ ಪರಿಹಾರ ನಿಧಿಗೆ 2 ಕೋಟಿ ದೇಣಿಗೆ

02:17 PM Apr 16, 2020 | mahesh |

ರಾಮನಗರ: ಕೋವಿಡ್‌-19 ಸೋಂಕು ನಿಯಂತ್ರಣ ಹೋರಾಟಕ್ಕೆ ನೆರವು ನೀಡುವುದನ್ನು ಮುಂದುವರಿಸಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ ಕಂಪನಿ (ಟಿಕೆಎಂ) ಮತ್ತು ಅದರ ನೌಕರರು ಸಿಎಂ ಪರಿಹಾರ ನಿಧಿಗೆ ಮತ್ತು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಒಟ್ಟು 2 ಕೋಟಿ ರೂ. ದೇಣಿಗೆ ನೀಡಿದೆ.

Advertisement

2 ಕೋಟಿ ರೂ ದೇಣಿಗೆ ಪೈಕಿ 1.35 ಕೋಟಿ ರೂ.ಗಳನ್ನು ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ ದೇಣಿಗೆಯಾಗಿದ್ದು, ಅದನ್ನು ಕರ್ನಾಟಕ ವಿಪತ್ತು ನಿರ್ವಹಣೆ ಪ್ರಾಧಿಕಾರ ನೀಡ ಲಾಗಿದೆ. ಉಳಿದ 64.5 ಲಕ್ಷ ರೂ.ಗಳನ್ನು ನೌಕರರಿಂದ ಸಂಗ್ರ ಹಿಸಲಾಗಿದ್ದು, ಇದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ನ ಉಪಾಧ್ಯಕ್ಷ ಶೇಖರ್‌ ವಿಶ್ವನಾಥನ್‌, ಉಪ ವ್ಯವಸ್ಥಾಪಕ ನಿರ್ದೇಶಕ ರಾಜು ಬಿ.ಕೆಟ್ಕಲೆ, ಟೊಯೋಟಾ ನೌಕರರ ಸಂಘದ ಕಾರ್ಯದರ್ಶಿ ಎಸ್‌.ದೀಪಕ್‌ ಕುಮಾರ್‌ ದೇಣಿಗೆಯ ಚೆಕ್ಕುಗಳನ್ನು ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿ ದರು.ಈ ಕುರಿತು ಹೇಳಿಕೆಯಲ್ಲಿ ಮಾಹಿತಿ ಕೊಟ್ಟಿರುವ ಟಿಕೆಎಂ ಉಪಾಧ್ಯಕ್ಷ ಶೇಖರ್‌ ವಿಶ್ವನಾಥನ್‌, ಕೋವಿಡ್‌ -19 ಬಿಕ್ಕಟ್ಟಿನ ತಮ್ಮ ಸಂಸ್ಥೆ ಸರ್ಕಾರದ ಬೆಂಬಲಕ್ಕೆ ನಿಂತಿದೆ. ಈ
ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಸಮುದಾಯಕ್ಕೆ ಅಗತ್ಯ ನೆರವು ನೀಡುವ ಬದ್ಧತೆಯೊಂದಿಗೆ ತಮ್ಮ ಸಂಸ್ಥೆಗಿದೆ ಎಂದಿದ್ದಾರೆ. 2 ಕೋಟಿ ರೂ. ದೇಣಿಗೆಯಲ್ಲದೆ, ಟೊಯೋಟಾ ಸಮೂಹ ಕಂಪನಿಗಳು ಸಹ 55 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರಕ್ಕೆ ದೇಣಿಗೆ ನೀಡಿದೆ ಎಂದರು.

ಇತ್ತೀಚೆಗ 3000 ಹಜ್ಮತ್‌ ಸೂಟುಗಳನ್ನು ಸರ್ಕಾರಿ ಆರೋಗ್ಯ ಸ್ವಯಂ ಸೇವಕರಿಗೆ ಹಸ್ತಾಂತರಿಸಲಾಗಿದೆ. ದಿನಗೂಲಿ ಕಾರ್ಮಿಕ ಕುಟುಂಬಗಳಿಗೆ 1000ಕ್ಕೂ ಅಧಿಕ ಅಗತ್ಯ ಆಹಾರ ಕಿಟ್‌ ವಿತರಿಸಲಾಗಿದೆ. ಪೊಲೀಸ್‌ ಇಲಾಖೆಗೆ ಸ್ಯಾನಿಟೈಸರ್‌ ಮತ್ತು ಮಾಸ್ಕ್ ನೀಡಲಾಗಿದೆ. ಆರೋಗ್ಯ ಇಲಾಖೆ ಬಳಕೆಗೆ 14 ಬಸ್‌ ನಿಯೋಜಿಸಲಾಗಿದೆ. ಟಿಕೆಎಂ ತನ್ನ ಪೂರೈಕೆದಾರ ಪಾಲುದಾರರಾದ ಸ್ಟಂಪ್‌ ಶುಯೆಲ್‌ ಮತ್ತು ಸೋಮಪ್ಪ ಸ್ಟ್ರೀಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗಳಿಗೆ ಉತ್ತೇಜನ ನೀಡಿದ್ದು, ಆರೋಗ್ಯ ಕಾರ್ಯಕರ್ತರಿಗೆ ದಿನಕ್ಕೆ 275 ರಿಂದ 10000ಕ್ಕೂ ಹೆಚ್ಚು ಫೇಸ್‌ ಶೀಲ್ಡ್‌ ಉತ್ಪಾದನೆಗೆ ಬೆಂಬಲ ನೀಡಿದೆ ಎಂದು
ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next