Advertisement

ಆಮ್ಲಜನಕ ಪೂರೈಕೆಗಾಗಿ ವಿವೋ ದಿಂದ 2 ಕೋಟಿ ರೂ.ದೇಣಿಗೆ

05:04 PM Apr 27, 2021 | Team Udayavani |

ನವದೆಹಲಿ: ದೇಶವು ಪ್ರಸ್ತುತ ಎದುರಿಸುತ್ತಿರುವ ಕೋವಿಡ್ 19  ಆರೋಗ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ಮಾರ್ಟ್ ಫೋನ್ ಬ್ರಾಂಡ್ ವಿವೋ, ಕೋವಿಡ್ 19  ಪರಿಹಾರ ಕಾರ್ಯಗಳಿಗೆ ನೆರವಾಗಲು ಮತ್ತು ವೈದ್ಯಕೀಯ  ಆಮ್ಲಜನಕ  ಪೂರೈಕೆಗೆ ನೆರವಾಗಲು 2 ಕೋಟಿ ರೂ. ದೇಣಿಗೆಯನ್ನು ಘೋಷಿಸಿದೆ.

Advertisement

ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ,ಜವಾಬ್ದಾರಿಯುತ ಕಾರ್ಪೊರೇಟ್ ಆಗಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುವ ಬದ್ಧತೆಯಿಂದ ಈ ದೇಣಿಗೆ ನೀಡುತ್ತಿರುವುದಾಗಿ ವಿವೋ ಇಂಡಿಯಾದ ನಿರ್ದೇಶಕ ನಿಪುಣ್ ಮಾರ್ಯಾ ತಿಳಿಸಿದ್ದಾರೆ.

2020 ರಲ್ಲಿ ವಿವೋ 9 ಲಕ್ಷ ಮಾಸ್ಕ್ ಗಳು, 15,000 ಪಿಪಿಇ ಕಿಟ್ ಗಳು ಮತ್ತು 50,000 ಲೀಟರ್ ಸ್ಯಾನಿಟೈಜರ್ ಅನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ದೇಣಿಗೆ ನೀಡಿತ್ತು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next