Advertisement
ಹೌದು. ಭಾರತ 70ನೇ ವರ್ಷದ ಸ್ವಾತಂತ್ರೊéàತ್ಸವ ಸಂಭ್ರಮಕ್ಕೆ ಕಾಲಿಡುತ್ತಿದ್ದು ಈ ನಿಟ್ಟಿನಲ್ಲಿ ಬ್ರಿಟಿಷ್ ಫಿಲಂ ಇನ್‌ಸ್ಟಿಟ್ಯೂಟ್ ಏಪ್ರಿಲ್‌ನಲ್ಲಿ ಅನೇಕ ಭಾರತೀಯ ಚಿತ್ರಗಳ ಪ್ರದರ್ಶನಕ್ಕೆ ಮುಂದಾಗಿದೆ. ಇದೇ ವೇಳೆ ಇನ್ನೂ ನಿರ್ಮಾಣ ಹಂತದಲ್ಲಿರುವ ಬಾಹುಬಲಿ -2 ಕೂಡ ಪ್ರದರ್ಶನಗೊಳ್ಳಲಿದ್ದು, ಏ.24ರಂದು ರಾಣಿ ಎಲಿಜಬೆತ್-2 ಸಿನಿಮಾ ವೀಕ್ಷಿಸಲಿದ್ದಾರೆ. ಮತ್ತೂಂದು ವಿಶೇಷ ಎಂದರೆ ಈ ಚಿತ್ರೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸುವ ಸಾಧ್ಯತೆ ಇದ್ದು, ಅಧಿಕೃತ ಸಮ್ಮತಿಯೊಂದು ಬಾಕಿ ಇದೆ ಎಂದು ಆಯೋಜಕರು ತಿಳಿಸಿದ್ದಾರೆ. ಬಾಹುಬಲಿ -2 ಚಿತ್ರದ ಟ್ರೈಲರ್ ಇದೇ ತಿಂಗಳು ಬಿಡುಗಡೆಯಾಗಲಿದ್ದು, ಏಪ್ರಿಲ್ 28 ರಂದು ವಿಶ್ವದಾದ್ಯಂತ ಸಿನಿಮಾ ತೆರೆಕಾಣಲಿದೆ ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ. Advertisement
ಬಾಹುಬಲಿ-2 ವೀಕ್ಷಿಸಲಿರುವ ಇಂಗ್ಲೆಂಡ್ ರಾಣಿ?
03:45 AM Mar 02, 2017 | |
Advertisement
Udayavani is now on Telegram. Click here to join our channel and stay updated with the latest news.