Advertisement

ವಿಮಾನ ನಿಲ್ದಾಣದಿಂದ 2.75 ಕೋಟಿ ಮಂದಿ ಪ್ರಯಾಣ

03:47 PM Feb 08, 2023 | Team Udayavani |

ದೇವನಹಳ್ಳಿ: ಕಳೆದ 2022ರ ವೇಳೆ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಟ್ಟು 2.75 ಕೋಟಿ ಪ್ರಯಾಣಿಕರು ವಿಮಾನದ ಮೂಲಕ ಪ್ರಯಾಣ ಮಾಡಿದ್ದು, ಏರ್‌ ಕಾರ್ಗೋ (ವಾಯು ಸರಕು ಸಾಗಣೆ) ಕ್ಷೇತ್ರದಲ್ಲಿಯೂ ಗಣನೀಯವಾದ ಅಭಿವೃದ್ಧಿ ಹೊಂದಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

Advertisement

ವಿವಿಧ ದೇಶಗಳಿಗೆ ಹಾರಾಟ: ವಾಯು ಮಾರ್ಗದ ಮೂಲಕ ಹೊಸ ಸ್ಥಳಗಳಿಗೆ ವಿಮಾನಯಾನ ಮೂಲಕ ಸಂಪರ್ಕ ಕಲ್ಪಿಸುವುದರಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಮೊದಲ ಆದ್ಯತೆ ನೀಡಿದೆ. ಭಾರತಾದ್ಯಂತ ಒಟ್ಟು 75 ಸ್ಥಳಕ್ಕೆ ನೇರವಾಗಿ ನಿತ್ಯ ಕಾರ್ಯಚರಣೆನಡೆಯುತ್ತಿದೆ. ಅಷ್ಟೇಅಲ್ಲದೇ ಬೆಂಗಳೂರಿನಿಂದಸಿಡ್ನಿ, ಆಸ್ಟ್ರೇಲಿಯಾ, ದುಬೈ,ಸ್ಯಾನ್‌ ಪ್ರಾನ್ಸಿಸ್ಕೊ, ಉತ್ತರಅಮೆರಿಕಕ್ಕೆ ಪ್ರತಿ ನಿತ್ಯ ವಿಮಾನ ಹಾರಾಟ ನಡೆಸುತ್ತಿವೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳ:ಕೋವಿಡ್‌ ಪೂರ್ವ ಅವಧಿಗೆ ಹೋಲಿಕೆ ಮಾಡಿದರೇ ಪ್ರಯಾಣಿಕರ ಸಾಂದ್ರತೆ ಕಳೆದ ವರ್ಷದ ಹೆಚ್ಚಾಗಿದೆ. ಈ ಪೈಕಿ ಡಿಸೆಂ ಬರ್‌ನಲ್ಲಿ ಅತ್ಯಧಿಕ ಅಂತರೆ10.7 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಭೇಟಿ ಮಾಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣಕ್ಕೆ ಅಂತಾ ರಾಷ್ಟ್ರೀಯ ಪ್ರಮುಖಮಹಾ ನಗರ ಹಾಗೂ ದೇಶೀ ಯವಾಗಿ ಮುಖ್ಯಪಟ್ಟಣಗಳಿಗೆ ಹೊಸ ವಿಮಾನ ಯಾನ ಮಾರ್ಗವೂನೇರವಾಗಿ ಸಂಪರ್ಕ ಕಲ್ಪಿಸುವುದರಿಂದ ಪ್ರಯಾಣಿಕರ ಸಂಖ್ಯೆಯೂ ಏರಿಕೆ ಆಗಿದೆ ಎಂದು ತಿಳಿದು ಬಂದಿದೆ.

ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ 2 ಉದ್ಘಾ ಟನೆಗೊಂಡಿದ್ದು, ಹೆಚ್ಚುವರಿ ವಿಮಾನಕಾರ್ಯಾಚರಣೆ ಪ್ರಾರಂಭಿಸಿದೆ. ಇನ್ನು ದಕ್ಷಿಣಭಾರತ, ಮತ್ತು ಮಧ್ಯ ಭಾರತದ ವಿಮಾನಯಾನ ಹೆಬ್ಬಾಗಿಲಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ವಿಮಾನ ನಿಲ್ದಾ ಣದ ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿ ಕಾರಿ ಸಾತ್ಯಕಿ ರಘುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಗೋ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ :  ವಿಶ್ವದ ಅತೀ ದೊಡ್ಡ ವಾಯು ಮಾರ್ಗ ಸರಕು ಸಾಗಣೆಯಲ್ಲಿ ಹೆಸರುವಾಸಿಯಾಗಿರುವ ಯುಪಿಎಸ್‌, ಡಿಎಚ್‌ಎಲ್, ಫೆಡ್‌ಎಕ್ಸ್‌ ಕಂಪನಿಗಳು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. 41 ವಾಯು ಮಾರ್ಗದಲ್ಲಿ ಸರಕು ಸಾಗಣೆ ಸೇವೆ ಒದಗಿಸುತ್ತಿದೆ. ಕಳೆದ 2022ರ ವೇಳೆ ಒಟ್ಟು 41.26 ಲಕ್ಷ ಮೆಟ್ರಿಕ್‌ ಟನ್‌ ಸಾಗಣೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next