Advertisement
ವಿಧಾನಸೌಧದಲ್ಲಿ ಬುಧವಾರ ವರದಿ ಸ್ವೀಕರಿಸಿ ಮಾತ ನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ, ನಬಾರ್ಡ್ ಸಲ್ಲಿಸಿರುವ ರಾಜ್ಯದ ಆದ್ಯತಾ ವರದಿ ಪ್ರಕಾರ 2020-21ನೇ ಸಾಲಿನಲ್ಲಿ 2,44,564 ಕೋಟಿ ರೂ.ಅಂದಾಜು ಸಾಲ ಸಾಮರ್ಥಯವಿದೆ. ಇದು 2019-20ನೇ ಸಾಲಿನ ಸಾಲದ ಅಂದಾಜಿಗಿಂತ ಶೇ. 4.3ರಷ್ಟು ಹೆಚ್ಚುವರಿಯಾಗಿದೆ. ಕೃಷಿ ವಲಯದ ಸಮಸ್ಯೆ ಗಳಿಂದ ಹೊರತರುವ ನಿಟ್ಟಿನಲ್ಲಿ ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.
Related Articles
Advertisement
ಕುರಿ, ಮೇಕೆ ಸಾಕಣೆಯನ್ನು ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಕಲಬುರಗಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆ ಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಕೋಳಿ ಸಾಕಣೆ, ಧಾರವಾಡ, ಬೆಂಗಳೂರು ನಗರ ಜಿಲ್ಲೆ ಯಲ್ಲಿ ಸಮಗ್ರ ಕೃಷಿ ಪದ್ಧತಿ, ಬೆಳಗಾವಿಯಲ್ಲಿ ಬೃಹತ್ ಶೀತಲ ಕೇಂದ್ರ, ರೇಷ್ಮೆಯನ್ನು ಹಾಸನ, ಚಿಕ್ಕಬಳ್ಳಾಪುರ, ತರಕಾರಿ ಬೆಳೆಯನ್ನು ಕೊಡಗು, ಬೆಂಗಳೂರು ಗ್ರಾಮಾಂ ತರ, ಹಾಸನ ಹಾಗೂ ಶಿವಮೊಗ್ಗ, ಉಪಮೇಲ್ಮೆ„ಚರಂಡಿ ವ್ಯವಸ್ಥೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗೂ ಮಾವು ಬೆಳೆಯನ್ನು ಹಾವೇರಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸ ಲಾಗುತ್ತಿದೆ ಎಂದು ಹೇಳಿದರು.
ಕ್ರಿಯಾ ಯೋಜನೆಯನ್ನು ಏಪ್ರಿಲ್ ಮೊದಲ ವಾರ ದೊಳಗೆ ಒದಗಿಸಿದರೆ ರಾಜ್ಯ ಆದ್ಯತಾ ವರದಿ ಸಿದ್ಧಪಡಿಸಲು ಅನುಕೂಲವಾಗಲಿದೆ. ರಾಜ್ಯದಲ್ಲಿ ರೇಷ್ಮೆ ವಲಯದ ಅಭಿವೃದ್ಧಿಗೂ ಸಾಕಷ್ಟು ಅವಕಾಶವಿದ್ದು, ಇದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ, ಈ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಮುಖ್ಯ ಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.
ಉಪವಲಯವಾರು ವಿವರ-ಕೃಷಿ ಸಾಲ ಬೆಳೆ ಉತ್ಪಾದನೆ ನಿರ್ವಹಣೆ ಹಾಗೂ ಮಾರ್ಕೆಟಿಂಗ್- 85,211 ಕೋಟಿ ರೂ. -ಕೃಷಿ ಮತ್ತು ಕೃಷಿಪೂರಕ ಚಟುವಟಿಕೆಗಳಿಗೆ ಒಟ್ಟು ಸಾಲ 31,005 ಕೋಟಿ ರೂ./ ಉಪ ಮೊತ್ತ 1,16,216 ಕೋಟಿ ರೂ. -ಕೃಷಿ ಮೂಲ ಸೌಕರ್ಯಕ್ಕೆ 7,091 ಕೋಟಿ ರೂ. -ಪೂರಕ ಚಟುವಟಿಕೆಗಳು -22,489 ಕೋಟಿ ರೂ. -ಕೃಷಿಗಾಗಿ ಸಾಲ ಸಾಮರ್ಥಯ (1+2+3) 1,45,797 ಕೋಟಿ ರೂ. -57,513 ಕೋಟಿ ರೂ. ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮ. -4,597 ಕೋಟಿ ರೂ. ರಫ್ತು ಸಾಲ. -5,574 ಕೋಟಿ ರೂ. ವಿದ್ಯಾಭ್ಯಾಸ. -27,532 ಕೋಟಿ ರೂ. ಗೃಹ – ವಸತಿ. -1,155 ಕೋಟಿ ರೂ. ನವೀಕರಿಸಬಹುದಾದ ಇಂಧನ ಶಕ್ತಿ. -2,393 ಕೋಟಿ ರೂ. ಸಾಮಾಜಿಕ ಮೂಲ ಸೌಕರ್ಯ ಕ್ಕಾಗಿ ಬ್ಯಾಂಕ್ ಸಂಪರ್ಕ. -2,44,564 ಕೋ.ರೂ. ಒಟ್ಟು ಆದ್ಯತಾ ಸಾಲ.