Advertisement

1984ರ ಸಿಕ್ಖ ವಿರೋಧಿ ದೊಂಬಿ: ಯಶ್‌ಪಾಲ್‌ಗೆ ನೇಣು,ನರೇಶ್‌ಗೆ ಜೀವಾವಧಿ

05:19 PM Nov 20, 2018 | Team Udayavani |

ಹೊಸದಿಲ್ಲಿ : 1984ರ ಸಿಕ್ಖ ದೊಂಬಿ ಪ್ರಕರಣದಲ್ಲಿ ದಿಲ್ಲಿ ಕೋರ್ಟ್‌ ಇಂದು ಯಶ್‌ಪಾಲ್‌ ಸಿಂಗ್‌ ಗೆ ಮರಣ ದಂಡನೆಯನ್ನು ಮತ್ತು ನರೇಶ್‌ ಶೇರಾವತ್‌ ಗೆ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. 

Advertisement

ಈ ಇಬ್ಬರೂ ಆರೋಪಿಗಳು ಸಿಕ್ಖ ಸಮುದಾಯದ ಇಬ್ಬರು ಸದಸ್ಯರನ್ನು ಕೊಂದ ಅಪರಾಧ ಎಸಗಿದವರಾಗಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ, ಈ ಇಬ್ಬರೂ ಅಪರಾಧಿಗಳಿಗೆ ಮರಣ ದಂಡನೆ ವಿಧಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿತ್ತು. ಈ ಅಪರಾಧಿಗಳು ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಜನಾಂಗೀಯ ಹತ್ಯೆ ನಡೆಸಿದ್ದು ಇದು ಅಪರೂಪದಲ್ಲೇ ಅಪರೂಪದ ಅಪರಾಧವಾಗಿರುವುದರಿಂದ ಇವರಿಗೆ ಮರಣ ದಂಡನೆ ವಿಧಿಸುವಂತೆ ಎಸ್‌ಐಟಿ ಆಗ್ರಹಿಸಿತ್ತು.

ಈ ಇಬ್ಬರು ಅಪರಾಧಿಗಳು ದಕ್ಷಿಣ ದಿಲ್ಲಿಯ ಮಹಿಪಾಲಪುರ ದಲ್ಲಿ ದೊಂಬಿಯ ವೇಳೆ  ಹರದೇವ್‌ ಸಿಂಗ್‌ ಮತ್ತು ಅವತಾರ್‌ ಸಿಂಗ್‌ ಎಂಬವರನ್ನು ಕೊಂದಿದ್ದರು ಎಂದು ಎಸ್‌ಐಟಿ ಹೇಳಿದೆ.

Advertisement

1984ರ ಸಿಕ್ಖ ವಿರೋಧಿ ದಂಗೆಯಲ್ಲಿ ಸುಮಾರು 3,000 ಮಂದಿಯ ಹತ್ಯೆ ನಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next