ಮುಂಬಯಿ: ಯುವಕನೊಬ್ಬನ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೀಗ ಆತನ ಜೀವವನ್ನೇ ಕಸಿದುಕೊಂಡಿರುವ ಘಟನೆ ಮುಂಬೈನಲ್ಲಿ ಸೋಮವಾರ ನಡೆದಿದೆ.
ಮೃತ ಯುವಕನನ್ನು ಮುಸ್ತಫಾ ಇಬ್ರಾಹಿಂ ಚುನಾವಾಲಾ ಎಂದು ಗುರುತಿಸಲಾಗಿದೆ.
ಈತನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇತ್ತು ಎಂದು ಪೋಷಕರು ಹೇಳಿಕೊಂಡಿದ್ದಾರೆ ಅದರಂತೆ ಅವರು ಬೈಕುಲ್ಲಾ ಬಳಿಯ ಮಜಗಾಂವ್‌ನ ತಾರಾ ಬಾಗ್ ಪ್ರದೇಶದ ನೆಸ್ಬಿಟ್ ರಸ್ತೆಯಲ್ಲಿರುವ ಅಕ್ವಾಗೆಮ್ ಕಟ್ಟಡದ ಆರನೇ ಮಹಡಿಯಲ್ಲಿ ವಾಸಿಸುತ್ತಿದ್ದ ಯುವಕನ ಕುಟುಂಬ ರವಿವಾರ ರಾತ್ರಿ ಮಲಗಿದ್ದ ಮುಸ್ತಫಾ ನಿದ್ದೆಯಲ್ಲಿ ಎದ್ದು ನಡೆದುಕೊಂಡು ಬಂದಿದ್ದಾನೆ ಅಲ್ಲದೆ ತಾನು ವಾಸವಿದ್ದ ಆರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ ಬೆಳಗ್ಗೆ 5:15ರ ಸುಮಾರಿಗೆ 3ನೇ ಮಹಡಿಯ ಪೋಡಿಯಂನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುಸ್ತಫಾ ಪತ್ತೆಯಾಗಿದ್ದಾನೆ ಇದನ್ನು ಕಂಡ ಅಪಾರ್ಟ್‌ಮೆಂಟ್ ಸಿಬ್ಬಂದಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಗಂಭೀರ ಗಾಯಗೊಂಡ ಯುವಕನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟೋತ್ತಿಗಾಗಲೇ ಯುವಕನ ಪ್ರಾಣಪಕ್ಷಿ ಹಾರಿಹೋಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಮುಸ್ತಫಾಗೆ ಇತ್ತೀಚೆಗಷ್ಟೇ ಸೋಮ್ನಾಂಬುಲಿಸಮ್ (somnambulism) ನಿದ್ರೆಯಲ್ಲಿ ನಡೆಯುವ ಸಮಸ್ಯೆ ಇರುವುದು ಕಂಡುಬಂದಿದ್ದು ಅದಕ್ಕಾಗಿ ಯುವಕನಿಗೆ ಚಿಕಿತ್ಸೆಯನ್ನು ಕೂಡ ನೀಡಲಾಗುತಿತ್ತು ಅಲ್ಲದೆ ಕಲಿಕೆಯಲ್ಲಿ ಚುರುಕಾಗಿದ್ದ ಮುಸ್ತಫಾ ಇತ್ತೀಚಿಗೆ ನಡೆದ NEET ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದ ಎನ್ನಲಾಗಿದ್ದು ಜೊತೆಗೆ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ತಯಾರಿ ನಡೆಸುತ್ತಿದ್ದ ಎಂದು ಪೋಷಕರು ಹೇಳಿಕೊಂಡಿದ್ದಾರೆ.
ಘಟನೆ ಸಂಬಂಧ ಬೈಕುಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್