Advertisement

ಬುರ್ಜ್‌ ಖಲೀಫಾದ ಒಂದು ದೀಪ ಖರೀದಿಸಿ ಬಡವರಿಗೆ ಊಟ ಒದಗಿಸಲು ನೆರವಾಗಿ!

08:04 AM May 06, 2020 | Hari Prasad |

ವಿಶ್ವದ ಅತಿ ಎತ್ತರದ ಕಟ್ಟಡ ‘ಬುರ್ಜ್‌ ಖಲೀಫಾ’ ಕೋವಿಡ್ 19 ಸೋಂಕು ಬಾಧಿತರಿಗೆ ನೆರವು ನೀಡಲು ಇದೀಗ ಮುಂದೆ ಬಂದಿದೆ.

Advertisement

ಸುಮಾರು ಒಂದು ಕೋಟಿ ಮಂದಿ ಬಡವರಿಗೆ ಊಟ ಪೂರೈಸುವ ಅಭಿಯಾನವನ್ನು ಇದು ಪ್ರಾರಂಭಿಸಿದ್ದು ಬುರ್ಜ್ ಖಲೀಫಾ ಕೈಗೊಂಡಿರುವ ಈ ಅಭಿಯಾನ ವಿನೂತನವಾಗಿದ್ದು, ನಾವು, ನೀವೂ ಸಹ ಇದರಲ್ಲಿ ಭಾಗಿಗಳಾಗಬಹುದಾಗಿದೆ.

ಅದು ಹೇಗೆಂದರೆ, ತನ್ನ ಕಟ್ಟಡದಲ್ಲಿರುವ ಅಷ್ಟೂ ಲೈಟ್‌ಗಳನ್ನು ಆನ್‌ ಲೈನ್‌ ಮೂಲಕ ಹರಾಜು ಹಾಕಲಿರುವ ಬುರ್ಜ್ ಖಲೀಪಾ, ಈ ಲೈಟ್ ಗಳನ್ನು ಖರೀದಿಸಿ ದೇಣಿಗೆ ನೀಡುವಂತೆ ಜನರಲ್ಲಿ ಮನವಿಯನ್ನು ಮಾಡಿಕೊಂಡಿದೆ. ಈ ಕಟ್ಟಡದಲ್ಲಿ ಒಟ್ಟು 1.2 ಮಿಲಿಯನ್ ದೀಪಗಳಿವೆ.

ಒಂದು ಲೈಟ್‌ಗೆ 10 ದಿರ್‌ ಹಮ್‌ (206 ರೂ.) ನಿಗದಿಪಡಿಸಲಾಗಿದ್ದು, ಈ ಮೂಲಕ ಸಂಗ್ರಹವಾಗುವ ಒಟ್ಟು ಮೊತ್ತದಲ್ಲಿ 1 ಕೋಟಿ ಮಂದಿಗೆ ಊಟ ಒದಗಿಸುವ ಯೋಜನೆ ಇದಾಗಿದೆ. 24 ಗಂಟೆಗಳ ಅವಧಿಯಲ್ಲಿ ಸಂಗ್ರಹವಾದ ಹಣದಲ್ಲಿ ಒಟ್ಟು 1.76 ಲಕ್ಷ ಮಂದಿಗೆ ಆಹಾರ ಪೂರೈಸಲಾಗಿದೆ.

ಆದರೆ, ಇಲ್ಲೊಂದು ವಿಶೇಷತೆಯಿದ್ದು ಇದು ಸಾಂಕೇತಿಕ ಹರಾಜು ಮಾತ್ರವೇ ಆಗಿರುತ್ತದೆ. ನೀವು ಆನ್ ಲೈನ್ ಮೂಲಕ ಲೈಟ್ ಖರೀದಿಸಿದ ತಕ್ಷಣ ನಿಮಗೇನೂ ಬುರ್ಜ್ ಖಲೀಫಾದ ಲೈಟ್ ಗಳನ್ನು ಕಳುಹಿಸಿ ಕೊಡಲಾಗುವುದಿಲ್ಲ.

Advertisement

ಆದರೆ ತನ್ನಲ್ಲಿರುವ ಅಷ್ಟೂ ಲೈಟ್ ಗಳನ್ನು ಸಾಂಕೇತಿಕವಾಗಿ ಹರಾಜು ಹಾಕುವ ಮೂಲಕ ಮತ್ತು ಆ ಮೂಲಕ ಸಂಗ್ರಹವಾಗುವ ದೇಣಿಗೆ ಮೊತ್ತವನ್ನು ಕೋಟಿ ಹೊಟ್ಟೆಗಳ ಹಸಿವನ್ನು ನೀಗಿಸಲು ವಿನಿಯೋಗಿಸುತ್ತಿರುವ ವಿಧಾನ ಮಾತ್ರ ವಿನೂತನವೂ ಪ್ರಶಂಸನೀಯವೂ ಆಗಿದೆ.

ಹಾಗಾಗಿ ನಾವೂ ಬುರ್ಜ್ ಖಲೀಫಾದ ದೀಪಗಳನ್ನು ಸಾಂಕೇತಿಕವಾಗಿ ಖರೀದಿಸಿದರೆ ಈ ಅಭಿಯಾನಕ್ಕೆ ಬೆಂಬಲ ನೀಡಿದಂತಾಗುತ್ತದೆ ಮತ್ತು ನೀವು ಒಂದು ದೀಪವನ್ನು ಸಾಂಕೇತಿಕವಾಗಿ ಖರೀದಿಸಿದಲ್ಲಿ ಆ ಹಣದಿಂದ ಒಬ್ಬರ ಹಸಿವು ನೀಗಿಸಿದ ಪುಣ್ಯ ನಮ್ಮದಾಗುವುದು.

ಈ ಅಭಿಯಾನ ಪ್ರಾರಂಭಗೊಂಡಿರುವ ಕೇವಲ 24 ಗಂಟೆಗಳೊಗಾಗಿ 18 ಮಹಡಿಗಳಿರುವ ಈ ವಿಶ್ವ ವಿಖ್ಯಾತ ಕಟ್ಟಡದ 18 ಸಾವಿರ ದೀಪಗಳ ಸಾಂಕೇತಿಕ ಖರೀದಿ ಪ್ರಕ್ರಿಯೆ ನಡೆದಿದೆ. ರವಿವಾರ ಸಂಗ್ರಹವಾದ ದೇಣಿಗೆ ಮೊತ್ತವನ್ನು ಯು.ಎ.ಇ.ಯಲ್ಲಿ ಕೋವಿಡ್ 19 ವೈರಸ್ ಬಾಧಿತರಿಗೆ ಒಟ್ಟು 180,000 ಊಟಗಳನ್ನು ನೀಡಲು ವಿನಿಯೋಗಿಸಲಾಗುವುದು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next