Advertisement

ಗಣಿತ ಪರೀಕ್ಷೆಗೆ1798 ಮಕ್ಕಳು ಗೈರು

12:39 PM Jun 28, 2020 | Team Udayavani |

ಚಿಕ್ಕೋಡಿ: ಕೋವಿಡ್ ಮಧ್ಯೆ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಎರಡನೆ ಪತ್ರಿಕೆ ಗಣಿತ ವಿಷಯದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 1798 ಮಕ್ಕಳು ಗೈರಾಗಿದ್ದಾರೆ.

Advertisement

ಕಳೆದ 25 ರಿಂದ ರಾಜ್ಯಾದ್ಯಂತ ಆರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಎರಡು ಪತ್ರಿಕೆಗಳು ಸುಗಮವಾಗಿಜರುಗಿದ್ದು, ಆದರೆ ಮಕ್ಕಳ ಗೈರು ಎದ್ದು ಕಾಣುತ್ತಿದೆ. ಚಿಕ್ಕೋಡಿ ಶೆ„ಕ್ಷಣಿಕ ಜಿಲ್ಲೆ ವ್ಯಾಪ್ತಿಯ 40,909 ಮಕ್ಕಳ ಪೈಕಿ 39,111 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದ 1798 ಮಕ್ಕಳು ಗೈರಾಗಿದ್ದಾರೆ. ಗಣಿತ ವಿಷಯದಲ್ಲಿ ಯಾವುದೇ ವಿದ್ಯಾರ್ಥಿ ನಕಲು ಮಾಡಿ ಡಿಬಾರ್‌ ಆದ ವರದಿಯಿಲ್ಲ.

ಚಿಕ್ಕೋಡಿ ಶೆ„ಕ್ಷಣಿಕ ಜಿಲ್ಲೆ ವ್ಯಾಪ್ತಿಯ ಅಥಣಿ ವಲಯದಲ್ಲಿ 166 ಮಕ್ಕಳು ಗೈರಾಗಿದ್ದಾರೆ. ಕಾಗವಾಡ ವಲಯದಲ್ಲಿ 49, ಚಿಕ್ಕೋಡಿ ವಲಯದಲ್ಲಿ 391, ನಿಪ್ಪಾಣಿ-129, ಗೋಕಾಕ-116, ಮೂಡಲಗಿ-253, ಹುಕ್ಕೇರಿ-196, ರಾಯಬಾಗ-498 ಮಕ್ಕಳು ಗೈರಾಗಿದ್ದಾರೆ. ಗಡಿ ಭಾಗದಲ್ಲಿ ಕೋವಿಡ್ ತಾಂಡವವಾಡುತ್ತಿರುವುದರಿಂದ ಮಕ್ಕಳಿಗೆ ಸಾಮಾಜಿಕ ಅಂತರದ ವ್ಯವಸ್ಥೆ ಮಾಡಿದ್ದಾರೆ. ಮಾಸ್ಕ್, ಸ್ಯಾನಿಟೈಸರ್‌, ಥರ್ಮಲ ಸ್ಕ್ರೀನಿಂಗ್‌ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಕ್ಕಳು ಹಾಗೂ ಪಾಲಕರಲ್ಲಿರುವ ಭಯವನ್ನು ಶಿಕ್ಷಣ ಇಲಾಖೆ ದೂರ ಮಾಡಿದೆ. ಹೀಗಾಗಿ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next