Advertisement
52 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಬಸ್ಸಿನಲ್ಲಿ 60 ಕ್ಕೂ ಹೆಚ್ಚಿನ ಮಂದಿಯನ್ನು ಹೊತ್ತುಕೊಂಡು ಹೋಗಲಾಗುತ್ತಿತ್ತು. ಬೆಳಗ್ಗೆ 9:00 ಗಂಟೆ ಸುಮಾರಿಗೆ ಪಿರೋಜ್‌ಪುರದ ಭಂಡಾರಿಯಾದಿಂದ ಹೊರಟು 10:00 ಗಂಟೆ ಸುಮಾರಿಗೆ ಬಾರಿಶಾಲ್-ಖುಲ್ನಾ ಹೆದ್ದಾರಿಯಲ್ಲಿ ಹೋಗುತ್ತಿದ್ದ ವೇಳೆ ಛತ್ರಕಾಂಡದಲ್ಲಿ ರಸ್ತೆ ಬದಿಯ ನೀರಿನ ಹೊಂಡಕ್ಕೆ ಬಸ್ ಉರುಳಿ ಬಿದ್ದಿದೆ.
Related Articles
Advertisement
“ನಾನು ಭಂಡಾರಿಯಾದಿಂದ ಬಸ್ ಹತ್ತಿದೆ. ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಕೆಲವರು ಹಜಾರದಲ್ಲಿ ನಿಂತಿದ್ದರು. ಚಾಲಕ ಮೇಲ್ವಿಚಾರಕರೊಂದಿಗೆ ಮಾತನಾಡುತ್ತಿರುವುದನ್ನು ನಾನು ನೋಡಿದೆ. ಇದ್ದಕ್ಕಿದ್ದಂತೆ ಬಸ್ ರಸ್ತೆಯಿಂದ ಕೆಳಗಿಳಿದು ಅಪಘಾತಕ್ಕೀಡಾಗಿದೆ” ಎಂದು ಬದುಕುಳಿದ ಎಂಡಿ ಮೊಮಿನ್ ಹೇಳಿದರು.
17 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಬಾರಿಶಾಲ್ ವಿಭಾಗೀಯ ಆಯುಕ್ತ ಎಂಡಿ ಶೌಕತ್ ಅಲಿ ದೃಢಪಡಿಸಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಮೃತರಲ್ಲಿ ಹೆಚ್ಚಿನವರು ಪಿರೋಜ್‌ಪುರದ ಭಂಡಾರಿಯಾ ಉಪಜಿಲಾ ಮತ್ತು ಜಲ್ಕತಿಯ ರಾಜಾಪುರ ಪ್ರದೇಶದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.