ಹೊಸದಿಲ್ಲಿ: ಸಂಘರ್ಷಪೀಡಿತ ಅಫ್ಘಾನಿಸ್ಥಾನದ ಕಾಬೂಲ್ ನಿಂದ 107 ಭಾರತೀಯರು ಸೇರಿ 168 ಮಂದಿಯನ್ನು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಕರೆತರಲಾಗಿದೆ.
ಭಾರತದ ಹಿಂಡನ್ ಏರ್‌ಬೇಸ್‌ಗೆ C-17 ವಾಯುಸೇನೆ ವಿಮಾನ ಬಂದಿಳಿದಿದೆ. ಆಫ್ಘನ್‌ನ ಹಿಂದೂಗಳು, ಸಿಖ್ಖರು ಸೇರಿ 168 ಜನ ಬಂದಿದ್ದಾರೆ. ಅದರಲ್ಲಿ 107 ಭಾರತೀಯರು ಇದ್ದಾರೆ.
ಇದನ್ನೂ ಓದಿ:“ತಾಲಿಬಾನ್ ಉಪಟಳ ಸಹಿಸಲಸಾಧ್ಯ” : ಕಾಬೂಲ್ ನಿಂದ ಅಮೆರಿಕಾ ತಲುಪಿತು ಮಹಿಳೆಯೋರ್ವಳ ಆಡಿಯೋ
ಆಫ್ಘನ್ ನ ಕಾಬೂಲ್ ನಲ್ಲಿ ಸಿಲುಕಿದ್ದ 87 ಭಾರತೀಯರ ರಕ್ಷಣೆ ಮಾಡಲಾಗಿರುವ ಬಗ್ಗೆಯೂ ತಿಳಿದು ಬಂದಿದೆ. 87 ಭಾರತೀಯರನ್ನು ರಕ್ಷಿಸಿ ತಜಕಿಸ್ತಾನದಿಂದ ಏರ್‌ಲಿಫ್ಟ್ ಮಾಡಲಾಗಿದೆ. ತಜಕಿಸ್ತಾನದಿಂದ ದೆಹಲಿಗೆ 87 ಭಾರತೀಯರ ಏರ್‌ಲಿಫ್ಟ್ ಮಾಡಲಾಗುತ್ತದೆ. ಭಾರತೀಯರ ಜತೆ ಇಬ್ಬರು ನೇಪಾಳಿಗರು ಕೂಡ ಸ್ಥಳಾಂತರ ಎಂದು ತಿಳಿದುಬಂದಿದೆ.
Related Articles
ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆ ಮಾಡುವುದಾಗಿ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಭರವಸೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಕೆಲವು ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳ ಮೂಲಕ ಸ್ಥಳಾಂತರಿಸುವ ಪ್ರಯತ್ನಗಳ ವಿವರಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಅವರು ಒಂದು ಸಣ್ಣ ವೀಡಿಯೋ ಕ್ಲಿಪ್ ಅನ್ನು ಸಹ ಪೋಸ್ಟ್ ಮಾಡಿದ್ದು, ಅದರಲ್ಲಿ ಸ್ಥಳಾಂತರಿಸಿದವರು “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿ ಸಂತಸಪಟ್ಟರು.