ಮುಂಬೈ: ನಾಲ್ಕು ಮಹಡಿಯುಳ್ಳ ಮನೆ ಕಟ್ಟಡವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಟ್ಟು 16 ಮಂದಿಗೆ ಗಾಯಗಳಾಗಿವೆ.
ಲಾಲ್‌ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟಾಣಿ ಬಾಲಕಿ ಮತ್ತು ಒಬ್ಬ ಮಹಿಳೆ ಸೇರಿದಂತೆ ನಾಲ್ವರಿಗೆ ಶೇ.70- 90ರಷ್ಟು ಗಂಭೀರ ಗಾಯಗಳಾಗಿವೆ.
ಗಣೇಶ್ ಗಲ್ಲಿಯ ಸಾರಾಭಾಯಿ ಅವರಿಗೆ ಸೇರಿದ್ದ ಮನೆ ಕಟ್ಟಡದ 2ನೇ ಮಹಡಿಯಲ್ಲಿ ಬೆಳಗ್ಗೆ 7.20ಕ್ಕೆ ಜ್ವಾಲೆ ಕಾಣಿಸಿಕೊಂಡಿದೆ. ಸಿಲಿಂಡರ್ ಸ್ಫೋಟದ ಪರಿಣಾಮ ಕೊಠಡಿಯ ಗೋಡೆಗಳು ಕುಸಿದುಬಿದ್ದಿವೆ.
“ದುರ್ಘಟನೆ ನಡೆದ ಸ್ಥಳಕ್ಕೆ ನಾನು ಖುದ್ದಾಗಿ ಭೇಟಿ ನೀಡಿದ್ದೆ. ಪುಟಾಣಿ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೈಕುಲ್ಲಾದ ಮಾಸಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮೇಯರ್ ಕಿಶೋರಿ ಪೆಡ್ನೆಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲ್ಟಿಕ್ ಸಮುದ್ರದಲ್ಲಿ ಹಿಟ್ಲರ್ ಕಾಲದ ಗೂಢಲಿಪಿ ಯಂತ್ರ ಪತ್ತೆ!