Advertisement

Bengaluru: ಲಾಲ್‌ಬಾಗ್‌ ಪ್ರವೇಶ ಶುಲ್ಕ 50 ರೂಪಾಯಿಗೆ ಏರಿಕೆ

04:05 PM Nov 09, 2024 | Team Udayavani |

ಬೆಂಗಳೂರು: ತೋಟಗಾರಿಕೆ ಇಲಾಖೆಯು ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರ ಪ್ರವೇಶ ಶುಲ್ಕ ಹಾಗೂ ವಾಹನಗಳ ನಿಲುಗಡೆ ಶುಲ್ಕವನ್ನು ಹೆಚ್ಚಿಸಲಾ ಗಿದೆ. ಇದೀಗ, ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 20 ರೂ. ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ.

Advertisement

2018ರಲ್ಲಿ ನಿಗದಿ ಪಡಿಸಿದ್ದ ದರವನ್ನು 6 ವರ್ಷಗಳ ನಂತರ ಏರಿಕೆ ಮಾಡಲಾಗಿದೆ. ಈ ಹಿಂದೆ ವಯಸ್ಕರರಿಗೆ ತಲಾ 30ರೂ. ಹಾಗೂ ಮಕ್ಕಳಿಗೆ 10 ರೂ. ಪ್ರವೇಶ ದರ ಇತ್ತು. ಇದನ್ನು ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 20 ರೂ.ಗಳಿಗೆ ಏರಿಸಲಾಗಿದೆ. ಅದೇ ರೀತಿ, ವಾಹನ ನಿಲುಗಡೆ ದರದಲ್ಲಿಯೂ ಏರಿಕೆ ಮಾಡಿದ್ದು, ಕಾರು ನಿಲುಗಡೆಗೆ 40ರೂ. ಇದ್ದದ್ದನ್ನು 60ರೂ.ಗೆ, ಟೆಂಪೋ ಟ್ರಾವೆಲ್‌ 80ರಿಂದ 100ರೂ.ಗಳಿಗೆ ಮತ್ತು ಬಸ್‌ಗಳಿಗೆ 120ರಿಂದ 200ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ದ್ವಿಚಕ್ರ ವಾಹನ ನಿಲುಗಡೆ ದರ ಬದಲಾಯಿಸಿಲ್ಲ.

ನಿರ್ವಹಣಾ ಕಾರ್ಯ, ನೀರಿನ ನಿರ್ವಹಣೆ, ವಿದ್ಯುತ್‌ ಬಳಕೆ, ಭದ್ರತಾ ವ್ಯವಸ್ಥೆಯ ವೆಚ್ಚ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿದೆ. ಜತೆಗೆ ಲಾಲ್‌ಬಾಗ್‌ಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಉದ್ಯಾನದ ಸ್ವತ್ಛತೆ ಕಾರ್ಯವೂ ಅಧಿಕವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಪ್ರವೇಶ ದರ ಹೆಚ್ಚಳ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ (ಲಾಲ್‌ಬಾಗ್‌) ಜಂಟಿ ನಿರ್ದೇಶಕ ಡಾ. ಎಂ.ಜಗದೀಶ್‌ ತಿಳಿಸಿದ್ದಾರೆ.

ವಾದ್ಯರಂಗ ನವೀಕರಣಕ್ಕೆ ತಜ್ಞರ ಸಭೆ: ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆಸಲಾ ಗಿದ್ದು, ಫ್ಲೈವುಡ್‌ ಸಂಶೋಧನಾ ಕೇಂದ್ರದಿಂದಲೂ ವರದಿ ಸಲ್ಲಿಸುವುದು ಬಾಕಿಯಿದೆ. ಬಳಿಕ ಪುರಾತತ್ವ ಇಲಾಖಾ ತಜ್ಞರಿಂದ ಸಭೆ ಜರುಗಲಿದೆ. ಅವರ ಅಭಿಪ್ರಾಯವನ್ನು ಪಡೆದು ಮುಂದಿನ ವಾರದಲ್ಲಿ 2ನೇ ಸಭೆ ನಡೆಯಲಿದ್ದು, ಒಟ್ಟಾರೆ ತಜ್ಞರ ಸಲಹೆ ಮೇರೆಗೆ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಗದೀಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next