Advertisement

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

12:05 AM May 01, 2024 | Team Udayavani |

ಅಮರಾವತಿ: ಅರ್ಹ ಮಹಿಳೆಯರಿಗೆ ತಿಂಗಳಿಗೆ 1,500 ರೂ. ಮತ್ತು ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3,000 ರೂ. ನೀಡುವುದಾಗಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

Advertisement

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಇದೇ ಮಾದರಿಯ ಗ್ಯಾರಂಟಿಗಳನ್ನು ಪ್ರಕಟಿಸಿ ಜಯಶಾಲಿಯಾಗಿತ್ತು. ಆಂಧ್ರದಲ್ಲಿ ಟಿಡಿಪಿ  ಜನಸೇನಾ ಮತ್ತು ಬಿಜೆಪಿ   ಚುನಾವಣೆಯನ್ನು ಎದುರಿಸುತ್ತಿವೆ.

ಇದಕ್ಕೂ ಮೊದಲು ಟಿಡಿಪಿಯು, ಮಹಿಳೆಯರಿಗೆ ಉಚಿತ ಬಸ್‌, ಉಚಿತ 3 ಅಡುಗೆ ಅನಿಲ ಸಿಲಿಂಡರ್‌, ಶಾಲೆಗೆ ಹೋಗುವ ಮಗು ಇರುವ ಕುಟುಂಬಕ್ಕೆ ವರ್ಷಕ್ಕೆ 15 ಸಾವಿರ ರೂ. ನೆರವು ಸೇರಿದಂತೆ ಇನ್ನಿತರ ಕೊಡುಗೆ ಗಳನ್ನು ಘೋಷಣೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next