Advertisement
ಕೋವಿಡ್ ಸೋಂಕು ತಡೆ ಹಾಗೂ ಭತ್ಯೆ ಮಂಜೂರಾತಿ ಸೇರಿದಂತೆ ಕೆಲವು ನಿರ್ದಿಷ್ಟ ಷರತ್ತುಗಳನ್ನು ವಿಧಿಸಿ ಗೃಹರಕ್ಷಕ ದಳ ಪಾಲಿಕೆಗೆ ಗೃಹರಕ್ಷಕ ದಳದ 150 ಜನ ಸಿಬ್ಬಂದಿ ಸೇವೆ ನೀಡಲು ಒಪ್ಪಿಗೆ ನೀಡಿದೆ. ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ ಸೇರಿ ಈಗಾಗಲೇ 438 ಜನ ಗೃಹರಕ್ಷಕ ದಳ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊಸದಾಗಿ 150 ಸಿಬ್ಬಂದಿಯನ್ನು 2021ರ ಜ.31ರವರೆಗೆ ಪಾಲಿಕೆ ನೇಮಕ ಮಾಡಿಕೊಂಡಿದೆ.ಕೆರೆಗಳಿಗೆ ಕಸ, ಕಟ್ಟಡ ತ್ಯಾಜ್ಯ ಹಾಗೂ ಕೊಳಚೆ ನೀರು ಬಿಡುವುದು, ಕೆರೆ ವ್ಯಾಪ್ತಿ ಯ ಪಾರ್ಕ್ ಹಾಳಾಗದಂತೆ ಹಾಗೂ ಕೆರೆಗಳ ಸುತ್ತ ಹಾಕಲಾಗಿರುವ ತಂತಿಗಳನ್ನು ಯಾರು ಹಾಳು ಮಾಡದಂತೆ ಎಚ್ಚರ ವಹಿಸುವ ಕೆಲಸವನ್ನು ಗೃಹರಕ್ಷಕ ದಳದ ಸಿಬ್ಬಂದಿ ಮಾಡಲಿದ್ದಾರೆ.
- ಗೃಹರಕ್ಷಕ ದಳ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ನೀಡಬೇಕು.
- ಸಿಬ್ಬಂದಿಗೆ ನಿತ್ಯ 455 ರೂ. ವೇತನ, 80 ರೂ. ಭತ್ಯೆ ನೀಡಬೇಕು. ಕರ್ತವ್ಯ ಅವಧಿ 8 ಗಂಟೆ ಮೀರಬಾರದು.
- ಸೋಂಕಿನ ಲಕ್ಷಣಗಳು ಕಂಡುಬಂದರೆ ಸ್ವ್ಯಾಬ್ ಟೆಸ್ಟ್ ಮಾಡಿಸಬೇಕು ಎಂಬದು ಸೇರಿದಂತೆ ಹಲವು ಷರತ್ತು ವಿಧಿಸಲಾಗಿದೆ.