Advertisement
ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿ ಇಲಾಖಾ ವಿಷಯಗಳ ಕುರಿತು ಗುರುವಾರ ನಡೆದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಈ ವಿಷಯ ತಿಳಿಸಿದರು. ಮಂಗಳವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
Related Articles
ಪ್ರತಿ ವಾಹನಕ್ಕೆ 8 ಲಕ್ಷ ರೂ.ವರೆಗೆ ಖರ್ಚು ಬರಲಿದ್ದು, ಇದನ್ನು ಪಡೆಯಲು ಮೀನುಗಾರಿಕೆ ಅಭಿವೃದ್ಧಿ ನಿಗಮದಲ್ಲಿ 200 ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಜತೆಗೆ ಆಧಾರ್, ಪಾನ್ ಹಾಗೂ ಪಡಿತರ ಚೀಟಿಯ ಪ್ರತಿಯನ್ನು ಸಲ್ಲಿಸಬೇಕು. ಸ್ವಸಹಾಯ ಸಂಘ, ಮೀನು ಉತ್ಪಾದಕರ ಸಂಸ್ಥೆ, ನಿಗಮದ ಅಸ್ತಿತ್ವದಲ್ಲಿರುವ ಏಜೆನ್ಸಿ ಪಡೆದವರು, ನಿರುದ್ಯೋಗಿಗಳು, ಮೀನುಗಾರಿಕೆ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಬಳಿಕ ಸಾಮಾನ್ಯ ವರ್ಗದವರು 2 ಲಕ್ಷ ರೂ. ಹಾಗೂ ಎಸ್‌ಸಿ-ಎಸ್‌ಟಿ ಫಲಾನುಭವಿಗಳು 1.50 ಲಕ್ಷ ರೂ. ಭದ್ರತಾ ಠೇವಣಿ ಇಡಬೇಕು, ಮಾಸಿಕ 3 ಸಾವಿರ ರೂ. ಪರವಾನಿಗೆ ಶುಲ್ಕ ಪಾವತಿಸಬೇಕು. ವಾಹನ ಪರವಾನಿಗೆ ಇರುವವರಿಗೆ ಮಾತ್ರ ತ್ರಿಚಕ್ರದ ವಿದ್ಯುತ್ ಚಾಲಿತ ವಾಹನ ಕೊಡಲಾಗುತ್ತದೆ.
Advertisement
ಭದ್ರತಾ ಠೇವಣಿ ಮರುಪಾವತಿಹಸಿ ಮೀನುಗಳನ್ನು ತಾಜಾ ಆಗಿಡಲು ಅಗತ್ಯ ವ್ಯವಸ್ಥೆ ಈ ವಾಹನದಲ್ಲಿ ಇರಲಿದೆ. ಶೀತಲೀಕರಿಸಲು ಅಗತ್ಯವಾದ ಮಂಜಿನಗಡ್ಡೆಯ ಬಾಕ್ಸ್, ಮೀನಿನ ಉಪ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಲು ಬೇಕಾದ ಪ್ರತ್ಯೇಕ ವ್ಯವಸ್ಥೆಯೂ ಇರಲಿವೆ. ಎರಡು ವರ್ಷಗಳ ಕಾಲ ನಿಗಮದಿಂದಲೇ ಈ ವಾಹನಗಳ ನಿರ್ವಹಣೆಯನ್ನೂ ಮಾಡಲಾಗುತ್ತದೆ. ಫಲಾನುಭವಿಗಳು ಮಧ್ಯದಲ್ಲೇ ಇದನ್ನು ಹಿಂದಿರುಗಿಸಿದರೆ, ಆರಂಭದಲ್ಲಿ ಅವರು ಇಟ್ಟಿದ್ದ ಭದ್ರತಾ ಠೇವಣಿಯನ್ನು ವಾಪಸ್ ನೀಡಲಾಗುವುದು.