Advertisement

ಭಾರತ ಮೂಲದ ಬಾಲಕಿಗೆ ಯುವ ವಿಜ್ಞಾನಿ ಪ್ರಶಸ್ತಿ

12:07 PM Nov 03, 2015 | Nagendra Trasi |

ಹ್ಯೂಸ್ಟನ್‌:ಕೋವಿಡ್‌-19ನ ಸಂಭಾವ್ಯ ಚಿಕಿತ್ಸೆಗೆ ಅನುವಾಗುವಂಥ ಸಂಶೋಧನೆ ಕೈಗೊಳ್ಳುತ್ತಿರುವ ಭಾರತೀಯ ಮೂಲದ 14 ವರ್ಷದ ಬಾಲಕಿಗೆ ಯುವ ವಿಜ್ಞಾನಿ ಪ್ರಶಸ್ತಿ ಹಾಗೂ 25 ಸಾವಿರ ಅಮೆರಿಕ ಡಾಲರ್‌ ಮೊತ್ತ ಒಲಿದು ಬಂದಿದೆ.

Advertisement

ಟೆಕ್ಸಾಸ್‌ನಲ್ಲಿ 8ನೇ ತರಗತಿ ಓದುತ್ತಿರುವ ಅನಿಕಾ ಚೆಬ್ರೋಲು ಕಂಪ್ಯೂಟರ್‌ ಆಧರಿತ ಡ್ರಗ್‌ ಡಿಸೈನ್‌ ವಿಧಾನದ ಮೂಲಕ ಕೋವಿಡ್‌-19ನ ಸ್ಪೈಕ್‌ ಪ್ರೊಟೀನ್‌ಗೆ ಜೋಡಣೆಯಾಗ ಬಲ್ಲ ಅಣುವಿನ ಸಂಶೋಧನೆಯಲ್ಲಿ ನಿರತಳಾಗಿದ್ದಾಳೆ.

ಆಕೆಯ ಪ್ರಯತ್ನವು ಮುಂದಿನ ದಿನಗಳಲ್ಲಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಬಲ್ಲದೆಂಬ ನಿರೀಕ್ಷೆಯೊಂದಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದು ಪ್ರಶಸ್ತಿ ನೀಡಿದ 3ಎಂ ಸಂಸ್ಥೆ ಹೇಳಿದೆ.

ತಂದೆ ಗೆದ್ದರೆ ಭಾರತಕ್ಕೆ ಹಿತ: ಟ್ರಂಪ್‌ ಪುತ್ರ
ನ್ಯೂಯಾರ್ಕ್‌: ಮುಂದಿನ ತಿಂಗಳು 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಗೆಲ್ಲಲೇ ಬೇಕು. ಅವರು ಜಯಸಾಧಿಸಿದರೆ ಮಾತ್ರ ಭಾರತಕ್ಕೆ ಅನುಕೂಲ ಎಂದು ಟ್ರಂಪ್‌ ಪುತ್ರ ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಹೇಳಿದ್ದಾರೆ.

ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬೈಡೆನ್‌ ಗೆದ್ದರೆ ಚೀನಾ ಪರ ನಿಲುವು ಪ್ರದರ್ಶಿಸುವುದು ಖಚಿತ ಎಂದಿದ್ದಾರೆ. ತಂದೆಯ ಪರ ಪ್ರಚಾರದ ನೇತೃತ್ವ ವಹಿಸಿರುವ ಟ್ರಂಪ್‌ ಜೂನಿಯರ್‌, ಚೀನಾ ಎಷ್ಟು ಅಪಾಯಕಾರಿ ಎಂಬುದು ಅಮೆರಿಕ ದಲ್ಲಿರುವ ಭಾರತೀಯ ಮೂಲದವರಿಗೆ ಗೊತ್ತಿದೆ.

Advertisement

ಭಾರತದ ಪ್ರಧಾನಿ ಮೋದಿ ಜತೆಗೆ ನನ್ನ ತಂದೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರಿಬ್ಬರ ನಾಯಕತ್ವದಲ್ಲಿ ಜಗತ್ತಿನ ಹಲವು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲು ಸಾಧ್ಯವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next