ಬೆಂಗಳೂರು: ಪಡಿತರ ಬದಲು ನಗದು ಕೂಪನ್ ಜಾರಿ ಹಿಂಪಡೆಧಿಯುವುದು, ಕಮಿಷನ್ ಹೆಚ್ಚಳ, ಲ್ಯಾಪ್‌ಟಾಪ್ ಮತ್ತು ಯುಪಿಎಸ್ ಉಪಕರಣಗಳನ್ನು ಮಾಲೀಕರು ಖರೀದಿಸುವ ಬದಲು ಸರ್ಕಾರವೇ ಒದಗಿಸುವುದು ಸೇರಿಧಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿಧಿತರ ವಿತರಕರ ಸಂಘ ಫೆ. 14ರಂದು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, “ಸರ್ಕಾರಿ ಪಡಿತರ ವಿತರಕರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಈ ಬಾರಿ ಫೆ.14ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ದಿನದ ಸಾಂಕೇತಿಕ ಪ್ರತಿಧಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಅಲ್ಲದೆ, ಸಮಾಧಿವೇಶ ನಡೆಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಧಿಸಲಾಗುವುದು,” ಎಂದರು.
“ಕಾರ್ಡ್‌ದಾರರಿಗೆ ಪಡಿತರ ಬದಲು ನಗದು ಕೂಪನ್ ಜಾರಿಗೊಳಿಸಿರುವುದನ್ನು ತಕ್ಷಣವೇ ವಾಪಸ್ ಪಡೆಯಬೇಕು. ಪ್ರತಿ ಕಿಂಟ್ವಾಲ್‌ಗೆ ನೀಡುತ್ತಿರುವ 70 ರೂ. ಕಮಿಷನ್‌ನ್ನು 150 ರೂ.ಗೆ ಹೆಚ್ಚಿಸುವುದು, ಕೇಂದ್ರದ ಮಾದರಿಯಲ್ಲಿ ರಾಜ್ಯ ಲೋಡಿಂಗ್ ಮತ್ತು ಆನ್‌ಲೋಡಿಂಗ್ ಕಾರ್ಮಿಧಿಕರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಬೇಕು.
2017ರ ಮಾರ್ಚ್ ತಿಂಗಳೊಳಗೆ ಪ್ರತಿ ಮಾಲೀಕರು ಸ್ವಂತ ಖರ್ಚಿನಲ್ಲಿ ಲ್ಯಾಪ್‌ಟಾಪ್, ಪ್ರಿಂಟರ್, ಯುಪಿಎಸ್ ಇತ್ಯಾದಿಗಳನ್ನು ಖರೀದಿಸುವಂತೆ ಆದೇಶಿಸಲಾಗಿದೆ. ಸರ್ಕಾರದ ಈ ಕ್ರಮ ಸರಿಯಾಗಿದೆ. ಆದರೆ, ಇದಕ್ಕೆ ಸುಮಾರು 50 ಸಾವಿರ ರೂ. ಭರಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರವೇ ಇದನ್ನು ಭರಿಸಬೇಕು. ಇಲ್ಲದಿದ್ದಲ್ಲಿ ಚೆಕ್‌ಲೀಸ್ಟ್ ಮೂಲಕ ಆಹಾರ ಪದಾರ್ಥ ವಿತರಿಸಲು ಅವಕಾಶ ಮಾಡಿಕೊಡಬೇಕು,” ಎಂದು ಆಗ್ರಹಿಸಿದರು.
“ಪಡಿತರ ವಿತರಕರು ಮತ್ತು ಸೀಮೆಎಣ್ಣೆ ವಿತರಕರು ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಸೀಮೆಎಣ್ಣೆ ಸ್ಥಗಿತಗೊಳಿಸುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಸೀಮೆಎಣ್ಣೆ ವಿತರಕರಿಗೆ ಗ್ಯಾಸ್ ಲೈಸನ್ಸ್ ಕೊಡಿಸಿದ ನಂತರ ಈ ಕುರಿತು ಕ್ರಮ ಕೈಗೊಳ್ಳಬೇಕು,” ಎಂದು ತಿಳಿಸಿದರು.