ವಿಮಾನ ಹಾರಾಟಕ್ಕೆ ಮೊದಲು ಕಡ್ಡಾಯವಾಗಿ ಒಳಗಾಗಬೇಕಿರುವ ಮದ್ಯ ಸೇವನೆ ಪರೀಕ್ಷೆಯನ್ನು ತಪ್ಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಏರ್‌ಇಂಡಿಯಾ
ವ್ಯವಸ್ಥಾಪಕರಿಗೆ ಸೂಚಿಸಿದೆ.
Advertisement
ಸಿಂಗಾಪುರ, ಕುವೈಟ್, ಬ್ಯಾಂಕಾಕ್, ಅಹಮದಾಬಾದ್ ಮತ್ತು ಗೋವಾಗಳಿಗೆ ತೆರಳುವ ಮತ್ತು ಅಲ್ಲಿಂದ ವಾಪಸಾಗುವ ವಿಮಾನಗಳಲ್ಲಿ ಈ ರೀತಿಯ ಕಾನೂನು ಉಲ್ಲಂಘನೆ ನಡೆಯುತ್ತಿದೆ ಎನ್ನಲಾಗಿದೆ. ಡಿಜಿಸಿಎ ನಡೆಸಿದ್ದ ಆಂತರಿಕ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದಂತೆ ಸಿಬ್ಬಂದಿಗೆ ಸೂಚಿಸುವ ಸಾಧ್ಯತೆಯಿದೆ. ಇದರಿಂದ ಏರ್‌ಇಂಡಿಯಾದಲ್ಲಿ ಮತ್ತೂಂದು ಸುತ್ತಿನ ಬಿಕ್ಕಟ್ಟು ತಂದೊಡ್ಡುವ ಲಕ್ಷಣಗಳೂ ಗೋಚರಿಸುತ್ತಿವೆ.