Advertisement

3 ವರ್ಷಗಳಲ್ಲಿ ದೇಶಾದ್ಯಂತ 13.13 ಲಕ್ಷ ಮಹಿಳೆಯರು ನಾಪತ್ತೆ

09:10 PM Jul 30, 2023 | Team Udayavani |

ನವದೆಹಲಿ: 2019ರಿಂದ 2021ರ ಅವಧಿಯಲ್ಲಿ ಭಾರತದಲ್ಲಿ 13.13 ಲಕ್ಷ ಮಂದಿ ಸ್ತ್ರೀಯರು ನಾಪತ್ತೆಯಾಗಿದ್ದಾರೆ. ಇದರಲ್ಲಿ ಮಧ್ಯಪ್ರದೇಶಕ್ಕೆ ಅಗ್ರಸ್ಥಾನವಿದ್ದರೆ, ಪ.ಬಂಗಾಳ ದ್ವಿತೀಯ ಸ್ಥಾನ ಪಡೆದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.

Advertisement

ಸಂಸತ್ತಿಗೆ ಕಳೆದ ವಾರ ನೀಡಿದ ಮಾಹಿತಿಯಲ್ಲಿ, 18 ವರ್ಷ ಮೇಲ್ಪಟ್ಟ 10,61,648 ಮಹಿಳೆಯರು, ಅದಕ್ಕಿಂತ ಕಡಿಮೆ ವಯಸ್ಸಿನ 2,51,430 ಯುವತಿಯರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲಾತಿ ಮಂಡಳಿ (ಎನ್‌ಸಿಆರ್‌ಬಿ) ಸಿದ್ಧಪಡಿಸಿದೆ. ಈ ಪೈಕಿ ಮಧ್ಯಪ್ರದೇಶವೊಂದರಲ್ಲೇ 1,60,180 ಮಹಿಳೆಯರು, 38,234 ಯುವತಿಯರು ತಪ್ಪಿಸಿಕೊಂಡಿದ್ದಾರೆ. ಪ.ಬಂಗಾಳ (1,56,905 ಮಹಿಳೆಯರು, 36,606 ಯುವತಿಯರು), ಮಹಾರಾಷ್ಟ್ರ (1,78,400 ಮಹಿಳೆಯರು, 13,033 ಯುವತಿಯರು) ನಂತರದ ಸ್ಥಾನ ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next