Advertisement

Ambedkar: ವಿಜಯವಾಡದಲ್ಲಿ 125 ಅಡಿ ಎತ್ತರದ ಅಂಬೇಡ್ಕರ್‌ ಪ್ರತಿಮೆ ಅನಾವರಣ

12:07 AM Jan 21, 2024 | Team Udayavani |

ಹೈದರಾಬಾದ್‌: ಆಂಧ್ರ ಪ್ರದೇಶದ ವಿಜಯವಾಡ ನಗರದ ಸ್ವರಾಜ್‌ ಮೈದಾನದಲ್ಲಿ 125 ಅಡಿ ಎತ್ತರದ ಡಾ| ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಯನ್ನು ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅನಾವರಣಗೊಳಿಸಿದರು.

Advertisement

ಇದೇ ವೇಳೆ ವಿಜಯವಾಡದಲ್ಲಿ ನಡೆದ ಸಾಮಾಜಿಕ ಸಮತಾ ಸಂಕಲ್ಪ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ಅಮೆರಿಕದ ನ್ಯೂಯಾರ್ಕ್‌ ಸ್ವಾತಂತ್ರ್ಯ ಪ್ರತಿಮೆಗೆ ಪ್ರಸಿದ್ಧ ವಾದರೆ, ಇನ್ನು ಮುಂದೆ ಆಂಧ್ರ ಪ್ರದೇಶದ ವಿಜಯವಾಡ “ಸಾಮಾಜಿಕ ನ್ಯಾಯದ ಪ್ರತಿಮೆ”ಗೆ ಪ್ರಸಿದ್ಧವಾಗಲಿದೆ. ನೂತನವಾಗಿ ಅನಾವರಣಗೊಂಡಿರುವ ಡಾ| ಅಂಬೇಡ್ಕರ್‌ ಪ್ರತಿಮೆಯು ನೆಲದಿಂದ ಒಟ್ಟು 206 ಅಡಿ ಎತ್ತರ ಇದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next