ತೀರ್ಥಹಳ್ಳಿ: ಕಳೆದ 10 ವರ್ಷಗಳಿಂದ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಬಾರಿ 11ನೇ ವರ್ಷದ ವರಮಹಾಲಕ್ಷ್ಮಿ ಹಬ್ಬವನ್ನು ಸೆ.8 ಶುಕ್ರವಾರದಂದು ಗೋಪಾಲಗೌಡ ರಂಗಮಂದಿರದಲ್ಲಿ ನಡೆಸಲಾಗುತ್ತದೆ ಎಂದು ಸವಿತಾ ಉಮೇಶ್ ಹೇಳಿದರು.
ಬುಧವಾರ ಬಂಟರಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಶ್ರಾವಣ ಮಾಸದಲ್ಲಿ ಬರುವ ವಿಶೇಷ ಹಬ್ಬ. ಈ ಹಬ್ಬವನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿಯೂ ಕೂಡ ಈ ಹಬ್ಬವನ್ನು ನಿಲ್ಲಿಸಿಲ್ಲ. ಹಾಗಾಗಿ ತಾಲೂಕಿನ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.
ಇನ್ನುಳಿದಂತೆ ಈ ಬಾರಿ ಹಬ್ಬದಲ್ಲಿ ಸರಿ ಸುಮಾರು 3,500 ಮಹಿಳೆಯರು ಸೇರುವ ನಿರೀಕ್ಷೆಯಲ್ಲಿ ಇದ್ದೇವೆ. ಉಳಿದಂತೆ ಶಾಸಕ ಆರಗ ಜ್ಞಾನೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಇರಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಮುತ್ತೈದೆಯರಿಗೂ ಬಾಗಿನ ವಿತರಣೆ ಮಾಡಲಾಗುತ್ತದೆ ಎಂದರು.
ಕಳೆದ ಬಾರಿ ವರಮಹಾಲಕ್ಷ್ಮಿ ಹಬ್ಬ ಮಾಡಿದ ಸಂದರ್ಭದಲ್ಲಿ ಬೆಳ್ಳಿ ಕಾಯಿನ್ ವಿತರಣೆ ಮಾಡಲಾಗಿತ್ತು ಈ ಬಾರಿ ಅಂತಹದ್ದೆನಾದ್ರೂ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಬಾರಿ ಅಂತಹ ಯೋಚನೆ ಇಲ್ಲ. ಆದರೆ ಅದನ್ನು ನೀಡಲು ಯಾರಾದರೂ ದಾನಿಗಳಿದ್ದಾರೆ ಈ ಬಾರಿಯೂ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ, ಬಾಳೆಬೈಲು ರಾಘವೇಂದ್ರ, ಕುಕ್ಕೆ ಪ್ರಶಾಂತ್, ನವೀನ್ ಹೆದ್ದೂರು,ರಕ್ಷಿತ್ ಮೇಗರವಳ್ಳಿ, ಗೀತಾ, ಜ್ಯೋತಿ ದೀಲಿಪ್, ಸಂಧ್ಯಾ, ಯಶೋದಾ, ಕೌಸಲ್ಯ, ಪದ್ಮ ನವೀನ್, ಸುಮಾ ರಾಮಚಂದ್ರ, ಕುಸುಮ ಮಂಜುನಾಥ್, ಡಾಕಮ್ಮ, ಸುಕನ್ಯಾ ಸೇರಿ ಹಲವರು ಉಪಸ್ಥಿತರಿದ್ದರು.