Advertisement

ಗಿರ್‌ ಅರಣ್ಯದಲ್ಲಿ 11 ದಿನಗಳಲ್ಲಿ 11 ಸಿಂಹಗಳ ಸಾವು; ತನಿಖೆಗೆ ಆದೇಶ

12:25 PM Sep 21, 2018 | |

ಜುನಾಗಢ: ಗುಜರಾತ್‌ನ ಗಿರ್‌ ಕಾಡಿನಲ್ಲಿ ಕಳೆದ 11 ದಿನಗಳಲ್ಲಿ ಕನಿಷ್ಠ 11 ಸಿಂಹಗಳು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. 

Advertisement

ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಪಿ.ಸಿ.ಸಕ್ಸೇನಾ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಅವರೀಗ ಗಿರ್‌ ಕಾಡಿಗೆ ದೌಡಾಯಿಸಿದ್ದಾರೆ.

ಸಿಂಹಗಳ ನಡುವೆಯೇ ಕಲಹ ನಡೆದು ಗಾಯಗೊಂಡು ಹೆಚ್ಚಿನ ಸಿಂಹಗಳು ಸಾವನ್ನಪ್ಪಿವೆ ಎನ್ನಲಾಗಿದೆ.

ಹೆಚ್ಚಿನ ಸಿಂಹಗಳು ಶ್ವಾಸಕೋಶದ ಸೊಂಕಿನಿಂದಾಗಿ  ಸಾವನ್ನಪ್ಪಿವೆ ಎಂದು ಗಿರ್‌ ಕಾಡಿನ ಅರಣ್ಯ ಅಧಿಕಾರಿ ಹೇಳಿದ್ದಾರೆ.

ಇನ್ನೂ ಕೆಲ ಸಿಂಹ ಅಸ್ವಸ್ಥಗೊಂಡಿದ್ದು ಅವುಗಳಿಗೆ ಚಿಕಿತ್ಸೆ ಮುಂದುವರಿದಿದೆ.

Advertisement

2015 ರ ಗಣತಿಯ ಪ್ರಕಾರ ಗಿರ್‌ ಕಾಡಿನಲ್ಲಿ 520 ಸಿಂಹಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next