Advertisement

2022ರೊಳಗೆ 11 ಲಕ್ಷ ಮನೆ ನಿರ್ಮಾಣ ಪೂರ್ಣ: ಸಚಿವ ವಿ.ಸೋಮಣ್ಣ

08:15 PM Dec 15, 2021 | Team Udayavani |

ಸುವರ್ಣವಿಧಾನಸೌಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ 5 ಲಕ್ಷ ಹೊಸ ಮನೆಗಳು ಹಾಗೂ ಬಾಕಿ ಉಳಿದ 6 ಲಕ್ಷ ಮನೆಗಳು ಸೇರಿ ಒಟ್ಟು 11 ಲಕ್ಷ ಮನೆಗಳನ್ನು 2022ರ ಜ.25ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಕೆ.ಹರೀಶ ಕುಮಾರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿ, ದಕ್ಷಿಣ ಜಿಲ್ಲೆಯಲ್ಲಿ ಈ ವರೆಗೂ 6705 ಮನೆ ಪೂರ್ಣಗೊಂಡಿದ್ದು, ಫಲಾನುಭವಿಗಳಿಗೆ 80 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 1458 ಮನೆಗಳು ಬಾಕಿ ಇದೆ. ಇದನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.

ರಾಜ್ಯದಲ್ಲಿಯೇ ಹೊಸದಾಗಿ 5 ಲಕ್ಷ ಮನೆಗಳನ್ನು ನಿರ್ಮಿಸಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದು 2022ರ ಜ.25 ರ ಒಳಗಾಗಿ ಇವುಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಕಂತುಗಳ ಸಂಖ್ಯೆ 3ಕ್ಕೆ ಇಳಿಸಿದ್ದು ಮೊದಲ ಕಂತಿನಲ್ಲಿ 40 ಸಾವಿರ ರೂ.ಗಳನ್ನು ನೀಡಲಾಗುವುದು.

ಇದನ್ನೂ ಓದಿ:ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಡಿ.16, 17ರಂದು ಪ್ರತಿಭಟನೆ

ಈ ಹಿಂದಿನ ಬಾಕಿ ಉಳಿದಿರುವ 6 ಲಕ್ಷ ಮನೆಗಳು ಸೇರಿ ಎಲ್ಲಾ ನೂತನ ಮನೆಗಳನ್ನು 2022ರ ಒಳಗಾಗಿ ಪೂರ್ಣಗೊಳಿಸಲಾಗುವುದು. ಈ ಸಂಬಂಧ ಎಲ್ಲಾ ಜಿಲ್ಲೆಗಳ ಸಿಇಒಗಳಿಗೆ ಸೂಚಿಸಲಾಗಿದೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next