Advertisement

ಬಿಜೆಪಿ-ಪಿಎಫ್ಐ ವೈಷಮ್ಯದಿಂದ 11 ಕೊಲೆ: ರಾಮಲಿಂಗಾರೆಡ್ಡಿ

06:20 AM Dec 15, 2017 | Team Udayavani |

ಬೆಂಗಳೂರು: ಪಿಎಫ್ಐ ಸಂಘಟನೆ ಹಾಗೂ ಬಿಜೆಪಿ ನಡುವಿನ ವೈಷಮ್ಯವೇ ಕೊಲೆಗಳಿಗೆ ಕಾರಣವಾಗುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ಐ ಮತ್ತು ಬಿಜೆಪಿ ನಡುವಿನ ವೈಷಮ್ಯಕ್ಕೆ ಕೊಲೆಗಳು ಆಗುತ್ತಿವೆ. ಈ ರೀತಿಯ 11 ಪ್ರಕರಣಗಳು ನಡೆದಿವೆ. ಆದರೆ, ಬಿಜೆಪಿಯವರು 18ರಿಂದ 20 ಪ್ರಕರಣಗಳು ನಡೆದಿವೆ ಎಂದು ಹೇಳುತ್ತಾರೆ ಎಂದರು.

ಬಿಜೆಪಿಯವರು ಗೊಬೆಲ್ಸ್‌ ಸಿದ್ಧಾಂತವನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಮತ್ತೇನಾದರೂ ಹೆಣ ಬಿದ್ದರೆ, ಬಿಜೆಪಿಯವರು ಅದರ ಮೇಲೂ ರಾಜಕೀಯ ಮಾಡುತ್ತಾರೆ. ಪರೇಶ್‌ ಮೆಸ್ತ ಪ್ರಕರಣವನ್ನು ಸಿಬಿಐಗೆ ವಹಿಸಿದಿದ್ದರೆ, ಬಿಜೆಪಿಯವರು ಇದನ್ನು ಇನ್ನಷ್ಟು ದೊಡ್ಡದು ಮಾಡುತ್ತಿದ್ದಾರೆ. ನಾವು ಯಾರ ಪರವೂ ಇಲ್ಲ ಅನ್ನುವುದು ಪ್ರಕರಣ ಸಿಬಿಐಗೆ ವಹಿಸಿರುವುದರಿಂದ ಗೊತ್ತಾಗುತ್ತದೆ ಎಂದರು.

ಶೋಬಾಗೆ ದಿವ್ಯದೃಷ್ಟಿ: ಸಂಸದೆ ಶೋಭಾ ಕರಂದ್ಲಾಜೆಯವರಿಗೆ ವಿಶೇಷ ದಿವ್ಯದೃಷ್ಟಿಯಿದ್ದು, ಅದರಿಂದ ಅವರಿಗೆ ಡೆಡ್‌ ಬಾಡಿ ಯಾವ ಸ್ಥಿತಿಯಿಲ್ಲಿದೆ, ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಇದ್ದಾರೊ ಅಥವಾ ನಾಪತ್ತೆಯಾಗಿದ್ದರೊ ಅನ್ನುವುದು ಗೊತ್ತಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಇದೇ ವೇಳೆ ಟಾಂಗ್‌ ನೀಡಿದರು.

ಹೊನ್ನಾವರದಲ್ಲಿ ಬಾಲಕಿಗೆ ಚಾಕು ಇರಿತ ಪ್ರಕರಣದ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಾರಿ ಬಿದ್ದಿದ್ದಕ್ಕೆ ಆಕೆಗೆ ಪೆಟ್ಟು ಬಿದ್ದಿದೆ ಎಂದು ಸ್ವತಃ ಸ್ಥಳೀಯ ಶಾಸಕ ಮಾಂಕಳ ವೈದ್ಯ ಹೇಳಿದ್ದಾರೆ. ಈ ಬಗ್ಗೆ ಅವರೊಂದಿಗೆ ನಾನು ದೂರವಾಣಿಯಲ್ಲಿ ಮಾತನಾಡಿದ್ದೇನೆ. ಇಂದು ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿ ದುರ್ಬಳಕೆ ಆಗುತ್ತಿವೆ. ಇವುಗಳ ಮೂಲಕ ತಪ್ಪು ಮಾಹಿತಿ ನೀಡಿ ಸಾರ್ವಜನಿಕರಿಗೆ ದಾರಿ ತಪ್ಪಿಸುವಂತಹ ಕೆಲಸ ಆಗುತ್ತಿದೆ. ಸ್ವಯಂ ನಿಯಂತ್ರಣ ಹಾಕಿಕೊಳ್ಳದಿದ್ದರೆ, ಕಾನೂನು ರೀತಿ ಕ್ರಮ ಜರುಗಿಸಬೇಕಾಗುತ್ತದೆ. ಇದಕ್ಕಾಗಿ ಸೈಬರ್‌ ಪೊಲೀಸರಿಗೆ ತರಬೇತಿ ನೀಡಲಾಗುವುದು ಎಂದರು.

Advertisement

“ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ “ನೆಕ್‌ ಟು ನೆಕ್‌ ಫೈಟ್‌’ ಇದೆ. ಸಮೀಕ್ಷೆಗಳ ಪ್ರಭಾವಕ್ಕೊಳಗಾಗಿರುವ ರಾಷ್ಟ್ರೀಯ ಮಾಧ್ಯಮಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳುತ್ತಿವೆ. ಆದರೆ, ಸಮೀಕ್ಷೆ ಅಂತಿಮವಲ್ಲ. ಸಮೀಕ್ಷೆಗಳು ಉಲ್ಟಾ ಆಗಲೂ ಬಹುದು. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಏನೇ ಇರಲಿ ಎಲ್ಲದಕ್ಕೂ ಫ‌ಲಿತಾಂಶದ ದಿನ ಉತ್ತರ ಸಿಗಲಿದೆ’.
– ರಾಮಲಿಂಗಾರೆಡ್ಡಿ, ಗೃಹ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next