Advertisement
ಎರಡೂ ನಗರಗಳಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಮುಂಬಯಿಯಲ್ಲಿ ಮಂಗಳವಾರ ಒಂದೇ ದಿನ 10,860 ಕೋವಿಡ್ ಕೇಸುಗಳು ಪತ್ತೆಯಾಗಿದ್ದು, ಸೋಮವಾರಕ್ಕೆ ಹೋಲಿಸಿದರೆ ಶೇ. 34.37ರಷ್ಟು ಹೆಚ್ಚಳವಾದಂತಾಗಿದೆ. ದೈನಂದಿನ ಪ್ರಕರಣ 20 ಸಾವಿರ ದಾಟಿದ್ದೇ ಆದಲ್ಲಿ, ಮುಂಬಯಿ ಯಲ್ಲಿ ಲಾಕ್‌ಡೌನ್ ಹೇರಲಾಗುವುದು ಎಂದು ಮೇಯರ್ ಕಿಶೋರಿ ಪಡೆ°àಕರ್ ಹೇಳಿದ್ದಾರೆ.
Related Articles
Advertisement
ಕೇಜ್ರಿ, ತಿವಾರಿಗೂ ಸೋಂಕು: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ದಿಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ ಅವರಿಗೆ ಸೋಂಕು ದೃಢಪಟ್ಟಿದೆ. ಕೇಜ್ರಿವಾಲ್ ಅವರು ಮನೆಯಲ್ಲೇ ಐಸೋಲೇಟ್ ಆಗಿದ್ದಾರೆ. ಕಾಂಗ್ರೆಸ್ ನಾಯಕ ರಣದೀಪ್ ಸುಜೇìವಾಲ ಅವರೂ ತಮ್ಮ ಪರೀಕ್ಷಾ ವರದಿ ಪಾಸಿಟಿವ್ ಬಂದಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕೋವಿಡ್ ಹೆಚ್ಚಳ : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗಳೂರಿನಲ್ಲಿ 2 ವಾರ ಶಾಲೆ ಬಂದ್
2 ಸಾವಿರದ ಸನಿಹಕ್ಕೆ ಒಮಿಕ್ರಾನ್ ಕೇಸು: ದೇಶದ 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೆ ಒಟ್ಟಾರೆ 1,892 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 766 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೇ ವೇಳೆ, 24 ಗಂಟೆಗಳ ಅವಧಿಯಲ್ಲಿ 37,379 ಮಂದಿಗೆ ಸೋಂಕು ದೃಢಪಟ್ಟಿದ್ದು, 124 ಮಂದಿ ಸಾವಿಗೀಡಾಗಿದ್ದಾರೆ.
24 ಗಂಟೆಗಳಲ್ಲಿ 10 ಲಕ್ಷ ಮಂದಿಗೆ ಸೋಂಕು: ಅಮೆರಿಕದಲ್ಲಿ ಪ್ರತೀ ದಿನವೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ನಿರ್ಮಾಣವಾಗುತ್ತಿದೆ. ಸೋಮವಾರ ಒಂದೇ ದಿನ 10 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 5.61 ಕೋಟಿ ದಾಟಿದೆ. ಈವರೆಗೆ ಸೋಂಕಿಗೆ 8.27 ಲಕ್ಷ ಮಂದಿ ಬಲಿಯಾದಂತಾಗಿದೆ.
ನೆದರ್‌ಲ್ಯಾಂಡ್‌ನಲ್ಲಿ ಪ್ರತಿಭಟನೆ: ಪ್ರತಿಭಟನೆಗಳಿಗೆ ಸರಕಾರ ನಿಷೇಧ ಹೇರಿದ್ದರೂ ಕೋವಿಡ್ ನಿರ್ಬಂಧಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೆದರ್‌ಲ್ಯಾಂಡ್‌ನಲ್ಲಿ ಸಾವಿರಾರು ಮಂದಿ ಬೀದಿಗಿಳಿದಿದ್ದಾರೆ. ಆ್ಯಮ್‌ಸ್ಟರ್‌ಡ್ಯಾಂ ನಲ್ಲಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಯೂ ನಡೆದಿದೆ.
ನಿರ್ಬಂಧಗಳೇನು?-ಪಂಜಾಬ್ ರಾ 10ರಿಂದ ಬೆ.5ರ ವರೆಗೆ ರಾತ್ರಿ ಕರ್ಫ್ಯೂ. ಶಾಲೆ-ಕಾಲೇಜು ಮುಚ್ಚಲು ಆದೇಶ. ಶೇ.50ರ ಆಸನ ಭರ್ತಿಯೊಂದಿಗೆ ಸಿನೆಮಾ ಮಂದಿರ ಕಾರ್ಯನಿರ್ವಹಿಸಲು ಅವಕಾಶ – ಬಿಹಾರ ರಾತ್ರಿ 10ರಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ -ಛತ್ತೀಸ್‌ಗಢ ಮೆರವಣಿಗೆ, ರ್ಯಾಲಿ, ಸಾರ್ವಜನಿಕ ಸಭೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮ ಗಳಿಗೆ ನಿರ್ಬಂಧ. ಪಾಸಿಟಿವಿಟಿ ದರ ಶೇ.4ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರ, ಲೈಬ್ರರಿ, ಈಜುಕೊಳ, ಮಾಲ್, ಸಿನೆಮಾ ಬಂದ್.