Advertisement
ಶನಿವಾರ ನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಕವಚ 108 ನೌಕರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯ 108 ನಿರ್ವಹಣೆ ಹಾಗೂ ಸೇವೆ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯಿಂದ ನೌಕರರ ಶೋಷಣೆ ಮಾಡುತ್ತಿದೆ ಎಂಬ ವ್ಯಾಪಕ ದೂರುಗಳಿವೆ. ಹೀಗಾಗಿ ಮರು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲೂ ಈ ಕುರಿತು ಚರ್ಚೆ ನಡೆಸಿದ್ದು, ಹಾಲಿ ಗುತ್ತಿಗೆ ಸಂಸ್ಥೆಗೆ 6 ತಿಂಗಳು ಗುತ್ತಿಗೆ ಅವಧಿ ನೀಡುವ ಸಲಹೆ ಬಂದಿತ್ತು. ಆದರೆ ನೌಕರರ ಹಿತರಕ್ಷಣೆಗಾಗಿ 3 ತಿಂಗಳಿಗೆ ಅವಧಿ ವಿಸ್ತರಣೆ ಮಾಡಿ ಎಂದು ಪಟ್ಟು ಹಿಡಿದೆ ಎಂದು ವಿವರಿಸಿದರು.
Related Articles
Advertisement
ಮೇಲ್ಮನೆ ಮಾಜಿ ಸದಸ್ಯ ಡಾ| ಎಂ.ಪಿ.ನಾಡಗೌಡ ಮಾತನಾಡಿ, ಅಂಬ್ಯುಲೆನ್ಸ್ ವ್ಯವಸ್ಥೆ ಬಲವರ್ಧನೆಗೊಳ್ಳಬೇಕಿದೆ. ಇಂದಿಗೂ ಅಂಬ್ಯುಲೆನ್ಸಗಳು ಗೂಡ್ಸ್ ವಾಹನಗಳಾಗಿವೆ. ಎಲ್ಲಿಯಾದರೂ ನಾಲ್ಕೈದು ಗೂಡ್ಸ್ ವಾಹನಗಳು ನಿಂತಿವೆ ಎಂದರೆ ಅದು ಸರ್ಕಾರಿ ಆಸ್ಪತ್ರೆ ಎಂಬಂತಾಗಿರುವುದು ನೋವಿನ ಸಂಗತಿ. ಬಂಡವಾಳಶಾಹಿಗಳು ಗುತ್ತಿಗೆ ಪಡೆದಿರುವ 108 ನಿರ್ವಹಣೆಯಿಂದ ನೌಕರರಿಗೆ ತೊಂದರೆಯಾಗುತ್ತಿದೆ ಎಂದರು.
ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, 108 ನೌಕರರ ಶೋಷಣೆ ತಪ್ಪಿಸಲು ಸರ್ಕಾರವೇ ನೇರವಾಗಿ ಈ ವ್ಯವಸ್ಥೆಯ ಕರ್ಣಧಾರತ್ವ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯರನಾಳ ವಿರಕ್ತಮಠದ ಗುರುಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಘಟನೆ ರಾಜ್ಯ ಉಪಾಧ್ಯಕ್ಷ ಶ್ರೀಶೈಲ ಹೂಗಾರ, ಎಂ.ಎನ್. ಪಾಟೀಲ ವೇದಿಕೆಯಲ್ಲಿದ್ದರು.