Advertisement

30ರಿಂದ ಶ್ರೀಶೈಲದಲ್ಲಿ ಯುಗಾದಿ ಮಹೋತ್ಸವ

06:30 PM Mar 28, 2022 | Team Udayavani |

ಕಲಬುರಗಿ: ನೆರೆಯ ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲಂ ಸಾರಂಗಧರ ಮಠದಲ್ಲಿ ಯುಗಾದಿ ಮಹೋತ್ಸವ ಪ್ರಯುಕ್ತ ಮಾ.30ರಿಂದ ಏಪ್ರಿಲ್‌ 2ರ ವರೆಗೆ ಜಗದ್ಗುರು ಸಾರಂಗಧರೇಶ್ವರ ರಾಷ್ಟ್ರೀಯ ಸೇವಾ ಪೀಠದಿಂದ ಶಿವತತ್ವ ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

ವರ್ಷಂಪ್ರತಿ ಶಿವರಾತ್ರಿ, ಯುಗಾದಿ ಮಹೋತ್ಸವದ ಅಂಗವಾಗಿ ಸಾರಂಗಧರ ಮಠದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಈ ಸಲ ಮಾ.30ರಂದು ನಿಡುಮಾಮಿಡಿ ಜಗದ್ಗರು ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಿಂಚನಸೂರ ಕಲ್ಮಠದ ಪೂಜ್ಯ ಸಿದ್ಧಮಲ್ಲ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆಯುವ ಆರಂಭದ ಕಾರ್ಯಕ್ರಮವನ್ನು ಕ್ರೇಡಲ್‌ ಅಧ್ಯಕ್ಷ ಚಂದು ಪಾಟೀಲ ಉದ್ಘಾಟಿಸುವರು ಎಂದು ಸಾರಂಗಧರ ಪೀಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ದಿನದ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ಗಣ್ಯರಾದ ನೀಲಕಂಠರಾವ್‌ ಮೂಲಗೆ, ಶರಣು ಪಪ್ಪಾ, ಮಲ್ಲಿಕಾರ್ಜುನ ಖೇಮಜಿ, ಗೌಸ ಬಾಬಾ, ಎಂ.ಎಸ್‌.ಪಾಟೀಲ ನರಿಬೋಳ, ದಿವ್ಯಾ ಹಾಗರಗಿ ಇತರರು ಪಾಲ್ಗೊಳ್ಳಲಿದ್ದಾರೆ.

ಮಾ.31ರಂದು ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸೊನ್ನದ ಡಾ| ಶಿವಾನಂದ ಮಹಾ ಸ್ವಾಮೀಜಿ, ಚವದಾಪುರಿ ಹಿರೇಮಠದ ಡಾ| ರಾಜಶೇಖರ ಶಿವಾಚಾರ್ಯರು, ಮಾಜಿ ಮೇಯರ್‌ ಶರಣು ಮೋದಿ, ಉದ್ಯಮಿದಾರ ಸಂತೋಷ ಬಿಲಗುಂದಿ ಭಾಗವಹಿಸುವರು ಎಂದು ವಿವರಿಸಿದರು.

ಏ.1ರಂದು ನಡೆಯುವ ಕಾರ್ಯಕ್ರಮವನ್ನು ಕೇಂದ್ರದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸುವವರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್‌ಡಿಬಿ) ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ ರೇವೂರ ಅಧ್ಯಕ್ಷತೆ ವಹಿಸುವರು. ಶಾಸಕರಾದ ಬಸವರಾಜ ಮತ್ತಿಮಡು, ಶರಣು ಸಲಗರ್‌, ಬಿ.ಜಿ.ಪಾಟೀಲ, ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

Advertisement

ಏ.2ರಂದು ಬೆಳಗ್ಗೆ 10ಕ್ಕೆ ಯುಗಾದಿ ಹಬ್ಬದಂದು ಶಿವೈಕ್ಯ ಜಗದ್ಗುರು ರಾಜದೇಶಿಕೇಂದ್ರ ಸ್ವಾಮೀಜಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಶಿವಾಷ್ಟೋತ್ತಾರ ನಾಮಾವಳಿ, ಮಹಾಮಂಗಳಾರತಿ, ಪೂಜ್ಯ ಜಗದ್ಗುರು ಮಹಾಸನ್ನಿ ಧಿಯವರಿಂದ ಆಶೀರ್ವಚನ ಸಿಗಲಿದೆ. ನಾಡಿನಾದ್ಯಂತ ಆಗಮಿಸುವ ಭಕ್ತರಿಗೆ ಶ್ರೀಮಠದಲ್ಲಿ ಎಂದಿನಂತೆ ವಸತಿ ಹಾಗೂ ಪ್ರಸಾದ ವ್ಯವಸ್ಥೆವಿರಲಿದೆ ಎಂದು ವಿವರಿಸಿದರು. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next