Advertisement

ಯಡೂರ ಕ್ಷೇತ್ರದಿಂದ ಶ್ರೀಶೈಲವರೆಗೆ ಪಾದಯಾತ್ರೆ ಯಶಸ್ವಿಗೊಳಿಸಿ

04:43 PM Jul 06, 2022 | Team Udayavani |

ಲೋಕಾಪುರ: ಧರ್ಮ ಜಾಗೃತಿ, ಪರಿಸರ ಕಾಳಜಿ, ಲಿಂಗದೀಕ್ಷೆಯಂತಹ ಧಾರ್ಮಿಕ ಕಾರ್ಯಗಳೊಂದಿಗೆ ಅ. 29ರಿಂದ ಜ. 15ರವರೆಗೆ ಬೆಳಗಾವಿ ಜಿಲ್ಲೆಯ ಯಡೂರ ಕ್ಷೇತ್ರದಿಂದ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದವರೆಗೆ ಪಾದಯಾತ್ರೆ ನಡೆಯಲಿದೆ.

Advertisement

ಹಾಗಾಗಿ ಭಕ್ತರನ್ನು ಆಹ್ವಾನಿಸಲು ಪೀಠವೇ ನಿಮ್ಮೆಡೆಗೆ ಬಂದಿದೆ ಎಂದು ಶ್ರೀಶೈಲ ಪೀಠದ ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು. ಪಟ್ಟಣದ ಎಂ.ಎಂ.ವಿರಕ್ತಮಠ ನಿವಾಸದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದ್ವಾದಶ ಪೀಠಾರೋಹಣ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಪಾದಯಾತ್ರೆಯ ಮಾರ್ಗ ಮಧ್ಯದಲ್ಲಿ ಬರುವ ಗ್ರಾಮ ನಗರಗಳಲ್ಲಿ ಧರ್ಮಜಾಗೃತಿ, ಲಿಂಗದೀಕ್ಷೆ, ದುಶ್ಚಟಗಳ ಭಿಕ್ಷೆ ಹಾಗೂ ಪಾದಯಾತ್ರೆಯ ಮಾರ್ಗದ ಎರಡು ಬದಿಗೆ ವೃಕ್ಷಗಳನ್ನು ನೆಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಕ್ತರು ಪಾದಯಾತ್ರೆ ಅಂಗವಾಗಿ ಕ್ಷೇತ್ರದಲ್ಲಿ ಜರುಗುವ ವಿವಿಧ ಸೇವೆಗಳಿಗೆ ಧನಸಹಾಯಕ್ಕೆ ವಾಗ್ಧಾನ ಮಾಡಿದರು. ಎಂ.ಎಂ.ವಿರಕ್ತಮಠ, ಲೋಕಣ್ಣ ಕತ್ತಿ, ಕೊಠಡಿ ನಿರ್ಮಾಣ, ತುಲಾಭಾರ ಸೇವೆಯನ್ನು ಶಿವನಗೌಡ ಪಾಟೀಲ ಮಾಡಿಕೊಡುವ ವಾಗ್ಧಾನ ಮಾಡುವ ಮೂಲಕ ಎಲ್ಲ ಭಕ್ತರಿಗೆ ಪ್ರೇರಣೆ ತುಂಬಿದರು.

ಯುವ ಮುಖಂಡ ಅರುಣ ಕಾರಜೋಳ ಶ್ರೀಗಳಿಗೆ ವಿಶೇಷ ಸನ್ಮಾನ ಮಾಡಿದರು. ನಂತರ ಶ್ರೀಗಳು ಶ್ರೀಶೈಲಕ್ಕೆ ಬಂದು ತಮ್ಮ ಸೇವೆ ಮಾಡಲು ಹೇಳಿದರು. ಕೆ.ಆರ್‌. ಮಾಚಪ್ಪನವರ, ಕುಮಾರ ಹುಲಕುಂದ ನಾಗಪ್ಪ ಅಂಬಿ, ಸಿದ್ದು ಕೊಣ್ಣುರ, ಪ್ರಕಾಶ ಚಿತ್ತರಗಿ, ತುಷಾರ ಬೋಪಲೆ ಇದ್ದರು ಕಾಣಿಕೆ ಸಲ್ಲಿಸುವವರು ದ್ವಾದಶ ಪೀಠಾರೋಹಣ ಸಮಿತಿಯ ಖಾ.ಸಂ. 3115201002967 ಕೆನರಾ ಬ್ಯಾಂಕ್‌ ಶ್ರೀಶೈಲಂ ಐಎಫ್‌ಎಸ್‌ಸಿ-ಸಿಎನ್‌ಆರ್‌ಬಿ 0004552ಗೆ ಜಮೆ ಮಾಡಬಹುದು ಎಂದು ತಿಳಿಸಿದರು.

ಯಾತ್ರೆಯ ಕುರಿತಾಗಿ ಹಿರೇಮಠದ ವಿಶ್ವನಾಥ ಕೊಣ್ಣೂರ. ಜಮಖಂಡಿ ಕಲ್ಯಾಣ ಮಂಟಪದ ಸ್ವಾಮೀಜಿ ಮಾತನಾಡಿದರು. ಎಂ.ಎಂ.ವಿರಕ್ತಮಠ, ಲೋಕಣ್ಣ ಉದಪುಡಿ, ಲೋಕಣ್ಣ ಕತ್ತಿ, ರಮೇಶ ಪಂಚಕಟ್ಟಿಮಠ, ನಾಗಪ್ಪ ಅಂಬಿ, ಎಸ್‌.ಎನ್‌.ಹಿರೇಮಠ, ಭೀಮಪ್ಪ ಹಲಕಿ, ಯಮನಪ್ಪ ಹೊರಟ್ಟಿ, ಷಣ್ಮುಖಪ್ಪ ಕೊಲ್ಹಾರ, ಸದಾಶಿವ ಹಗ್ಗದ, ವಸಂತಗೌಡ ಪಾಟೀಲ, ವಿರೇಶ ಪಂಚಕಟ್ಟಿಮಠ, ಅಯ್ಯಪ್ಪಗೌಡ ಪಾಟೀಲ, ಗುಣಕರ ಶೆಟ್ಟರ, ಡಿ.ಆರ್‌.ದಾಸರಡ್ಡಿ, ಅಭಯ ವಿರಕ್ತಮಠ, ಡಿ.ಎಂ.ತುಬಾಕಿ, ಕಾಶಲಿಂಗ ಮಾಳಿ, ಚಂದ್ರಕಾಂತ ರಂಗಣ್ಣವರ, ರತ್ನಾಕರ ಬಾಸುತಕರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next