ಅಮರಾವತಿ: 4,700 ಎಕ್ರೆ ವಿವಾದಿತ ಅರಣ್ಯ ಭೂಮಿಯನ್ನು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹಸ್ತಾಂತರಿಸಲು ಆಂಧ್ರಪ್ರದೇಶ ಸರಕಾರ ಯೋಜಿಸಿದೆ.
ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಆಂಧ್ರಪ್ರದೇಶ ಮುಜರಾಯಿ ಇಲಾಖೆ ಸಚಿವ ಕೊಟ್ಟು ಸತ್ಯನಾರಾಯಣ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಗುಲದ ಅಭಿವೃದ್ಧಿ ನಿಟ್ಟಿನಲ್ಲಿ ಅರಣ್ಯ ಸಚಿವ ಮತ್ತು ಕಂದಾಯ ಸಚಿವರು ತಮ್ಮ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ’ ಎಂದರು.
ದೇಗುಲದ ಸ್ಥಳದ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ಅನೇಕ ವರ್ಷಗಳಿಂದ ವಿವಾದ ಬಗೆಹರಿಯದೇ ಉಳಿದಿತ್ತು.
ದೇಗುಲದ ಇತಿಹಾಸದಲ್ಲೇ ಈ ನಿರ್ಧಾರವು ಐತಿಹಾಸಿಕವಾಗಿದೆ. ಈಗಾಗಲೇ ದೇಗುಲ ಪಟ್ಟ ಣದಲ್ಲಿ ಬಸ್ ಡಿಪೋಗೆ ನಾಲ್ಕು ಎಕ್ರೆ ಸ್ಥಳ ನೀಡ ಲಾಗಿದೆ. ಜತೆಗೆ ಸಮುದಾಯ ಭವನಗಳನ್ನು ನಿರ್ಮಿಸಲಾಗುವುದು ಎಂದು ಕೊಟ್ಟು ಸತ್ಯನಾ ರಾ ಯಣ ಮಾಹಿತಿ ನೀಡಿದರು.
ಇನ್ನೊಂದೆಡೆ ಆಂಧ್ರ ಪ್ರದೇಶ ಸರಕಾರ 3,000 ದೇಗುಲಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದ್ಯತೆಯ ಮೇರೆಗೆ ಪ್ರತೀ ದೇಗುಲಕ್ಕೆ 10 ಲಕ್ಷ ರೂ. ಅನುದಾನ ನೀಡಲಾ ಗುತ್ತಿದೆ ಎಂದು ಹೇಳಿದರು.