ಕೊಳ್ಳೇಗಾಲ: ರಾಜ್ಯ ಸರ್ಕಾರ ವಿವೇಕ ಯೋಜನೆಯ ಡಿಯಲ್ಲಿ ಜಿಲ್ಲೆಯಲ್ಲಿ 105 ಶಾಲಾ ಕೊಠಡಿ ನಿರ್ಮಾಣಕ್ಕೆ 5.12 ಕೋಟಿ ಮಂಜೂರು ಮಾಡಿದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.
ನಗರದ ಸರ್ಕಾರಿ ಎಸ್‌ವಿಕೆ ಪ್ರೌಢಶಾಲೆ ಆವರಣದಲ್ಲಿ ನೂತನ ಕೊಠಡಿಗಳಿಗೆ ಶಂಕು ಸ್ಥಾಪನೆ ಮತ್ತು ನೂತನ ಕೊಠಡಿಗಳ ಉದ್ಘಾಟಿಸಿ ಮಾತನಾಡಿ, ಕ್ಷೇತ್ರ ದಲ್ಲಿ 35 ಕೊಠಡಿ ನಿರ್ಮಾಣಕ್ಕೆ ಮಂಜೂರಾತಿ ಲಭ್ಯವಾಗಿದೆ ಎಂದರು.
ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ವಿವೇಕ ಹೇಳಿ ಕೊಡುವುದರ ಜೊತೆಗೆ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸುವ ಸಲುವಾಗಿ 988 ಕೋಟಿ ರೂ. ಅಂದಾಜಿನಲ್ಲಿ 7601 ಶಾಲಾ ಕಾಲೇಜು ಕೊಠಡಿಗಳನ್ನು ನಿರ್ಮಾಣ ಮಾಡಲು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವಿಧ್ಯುಕ್ತ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ನೂತನ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿ ಸಿದ್ದು 10 ದಿನಗಳ ಒಳಗಾಗಿ ಟೆಂಡರ್ ಕರೆದು ಜನವರಿ ತಿಂಗಳಿನಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಯಾವ ಸರ್ಕಾರವು ಈ ರೀತಿಯ ಶಾಲಾ ಕೊಠಡಿ ನಿರ್ಮಾಣಕ್ಕೆ ಮಂಜೂರು ಮಾಡಿಲ್ಲ ಎಂದು ವಿರೋಧ ಪಕ್ಷದವರಿಗೆ ಟಾಂಗ್ ಕೊಟ್ಟರು. ರಾಜ್ಯದ 224 ಕ್ಷೇತ್ರಗಳಲ್ಲಿ ತಲಾ 20 ಕೊಠಡಿಗಳನ್ನು ನಿರ್ಮಾಣ ಮಾಡಲು ಮಂಜೂರಾತಿ ನೀಡಿದೆ. ಆದರೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ 35 ಕೊಠಡಿ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ವಿಶೇಷ ಮಂಜೂ ರಾತಿ ನೀಡಿದ್ದಾರೆ ಎಂದರು.
ಬಿಇಒ ಚಂದ್ರಪಾಟೀಲ್ ಮಾತನಾಡಿ, ಶಿಥಿಲ ಗೊಂಡಿರುವ ಶಾಲೆಗಳ ದುರಸ್ತಿಗಾಗಿ ಸರ್ಕಾರ 74 ಲಕ್ಷ ಮಂಜೂರು ಮಾಡಿದೆ ಎಂದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ನಾಸೀರ್ ಷರೀಫ್, ಕವಿತಾ, ರಾಮಕೃಷ್ಣ, ಪರಮೇ ಶ್ವರಯ್ಯ, ಸೆಲ್ವರಾಜ್, ಸೋಮಣ್ಣ, ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷೆ ಮಂಜುಳಾ, ಇಒ ಮಹೇಶ್, ಶಾಲೆಯ ಪ್ರಾಂಶುಪಾಲ ಶ್ರೀಧರ್, ಉಪ ಪ್ರಾಂಶು ಪಾಲರಾದ ವಿಶ್ವನಾಥ್, ಎಸ್ ಡಿ ಎಂಸಿ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ನಾಗ ರಾಜು, ಸಾಹಿತಿ ದೊರೆ ಸ್ವಾಮಿ ಹಾಗೂ ಶಿಕ್ಷಕರು, ವಿದ್ಯಾರ್ಥಿ ಗಳು ಇದ್ದರು.