Advertisement

100 ಮೀ. ಬ್ಯಾಕ್‌ಸ್ಟ್ರೋಕ್‌:  ಕ್ಯಾತ್ಲಿನ್‌ ಬೆಕರ್‌ ವಿಶ್ವದಾಖಲೆ

02:55 PM Jul 30, 2018 | Harsha Rao |

ನ್ಯೂಯಾರ್ಕ್‌: ಅಮೆರಿಕದ ಈಜುಗಾರ್ತಿ ಕ್ಯಾತ್ಲಿನ್‌ ಬೆಕರ್‌ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

Advertisement

ಶನಿವಾರ ನಡೆದ ಅಮೆರಿಕದ ಈಜುಕೂಟದಲ್ಲಿ ಬೇಕರ್‌ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಅರ್ಧ ಸೆಕೆಂಡ್‌ನ‌ಷ್ಟು ಉತ್ತಮಪಡಿಸಿಕೊಂಡು, 58 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದಾರೆ. ಈ ಮೂಲಕ ಕೆನಡದ ಕೈಲಿ ಮಸ್ಸಿ ಅವರ 58.10 ಸೆಕೆಂಡ್‌ಗಳ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ರಿಯೋ ಒಲಂಪಿಕ್ಸ್‌ನಲ್ಲಿ ಬೆಕರ್‌ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕೆನಡದ ಕೈಲಿ ಜತೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಗಳಿಸಿದ್ದ ಬೆಕರ್‌, ಈ ದಾಖಲೆಯನ್ನು ಮುರಿಯಲು ಸತತ ಪ್ರಯತ್ನ ನಡೆಸಿದ್ದರು. ಈ ವಾರ ನಡೆದಿದ್ದ ಇನ್ನೊಂದು ಪಂದ್ಯಾವಳಿಯಲ್ಲಿ 16ರ ಹರೆಯದ ರೇಗನ್‌ ಸ್ಮಿತ್‌ ಅವರೊಂದಿಗೆ 200 ಮೀ. ಚಿನ್ನದ ಪದಕವನ್ನು ಬೆಕರ್‌ ಹಂಚಿಕೊಂಡಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ
ಈ ದಾಖಲೆಯೊಂದಿಗೆ ಅವರು ಮುಂದಿನ ತಿಂಗಳು ಟೋಕಿಯೋದಲ್ಲಿ ನಡೆಯುವ ಪಾನ್‌ ಪೆಸಿಫಿಕ್‌ ಚಾಂಪಿಯನ್‌ಶಿಪ್‌ ಹಾಗೂ ಮುಂದಿನ ವರ್ಷ ದ. ಕೊರಿಯಾದಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ಗ್ೂ ಅರ್ಹತೆ ಗಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next