Advertisement

ಎಸ್‌-ವ್ಯಾಸಕ್ಕೆ 100 ಕೋಟಿ ನೆರವು

10:56 AM May 26, 2018 | Harsha Rao |

ಹೊಸದಿಲ್ಲಿ: ಬೆಂಗಳೂರಿನ ಜಿಗಣಿಯಲ್ಲಿರುವ  ಎಸ್‌-ವ್ಯಾಸ ಯೋಗ ವಿಜ್ಞಾನ ಕೇಂದ್ರಕ್ಕೆ 100 ಕೋಟಿ ರೂ. ಅನುದಾನ ನೀಡಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಒಪ್ಪಿಗೆ ಸೂಚಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ಸಲಹೆಗಾರರಾಗಿರುವ ಡಾ| ಎಚ್‌.ಆರ್‌.ನಾಗೇಂದ್ರ ಅವರು ಸ್ಥಾಪಿಸಿದ ಸಂಸ್ಥೆ ಇದಾಗಿದೆ.  ಜತೆಗೆ  ಜವಾಹರಲಾಲ್‌ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರ ದೇಶದ ಒಂಭತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತ (ಅಟೊನೊಮಸ್‌)ಮಾನ್ಯತೆ ನೀಡಿದೆ. ಇದಲ್ಲದೆ,  ಪಿಎಚ್‌ಡಿ ಹಾಗೂ ಎಂ.ಫಿಲ್‌ನಂಥ ಉನ್ನತ ಅಧ್ಯಯನಕ್ಕೆ 2016ರಲ್ಲಿ ತಾನೇ ಹೊರಡಿಸಿದ್ದ ನಿಯಮಾವಳಿಗಳನ್ನು ಯುಜಿಸಿ ವಾಪಸ್‌ ಪಡೆದಿದೆ. ಹೀಗಾಗಿ ವೈವಾ (ಸಂದರ್ಶನ) ಫ‌ಲಿತಾಂಶವೇ ಅಂತಿಮ ಎನ್ನುವ ನಿಯಮ ಇನ್ನು ಅನ್ವಯವಾಗುವುದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next